ದಿನೆ ದಿನೆ ಹೆಚ್ಚುತ್ತಿರುವ ಬಿಸಲಿನ ತಾಪ

0
13

ನದಿ ನೀರು ಪಾತಾಳಕ್ಕೆ-ಎದರುರಾಗುತ್ತಿದೆ ಕುಡಿಯುವ ನೀರಿನ ಸಮಸ್ಯೆ

loading...

ರವಿ ಮೇಗಳಮನಿ

ಹಿರೇಕೆರೂರ: ತಾಲೂಕಿನಲ್ಲಿ ಬಿಸಲಿನ ತಾಪ ದಿನೆ ದಿನೆ ಹೆಚ್ಚಾಗುತ್ತಿದ್ದು, ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆ ಇಲ್ಲವಾಗಿದ್ದರೂ, ಕೊಳವೆ ಬಾವಿಗಳು ಬತ್ತಿಹೋಗುತ್ತಿದ್ದರಿಂದ ಎಪ್ರೀಲ್ ತಿಂಗಳ ಮಧ್ಯದಿಂದ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಎಲ್ಲ ಸಾಧ್ಯತೆಗಳು ಗೋಚರಿಸತೊಡಗಿವೆ.
ತಾಲೂಕು ಮತ್ತು ರಟ್ಟೀಹಳ್ಳಿ ತಾಲೂಕು ಸೇರಿದಂತೆ ಒಟ್ಟು 128 ಹಳ್ಳಿಗಳ ಪೈಕಿ ಬೈರನಪಾದದ ಬಳಿ ಹರಿದಿರುವ ತುಂಗಭದ್ರಾ ನದಿಯಿಂದ ಹಿರೇಕೆರೂರ ಪಟ್ಟಣ ಸೇರಿದಂತೆ 43, ರಟ್ಟೀಹಳ್ಳಿಯ 13 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೊಜನೆಯಡಿ ನೀರು ಪೂರೈಕೆಯಾಗುತ್ತಿದೆ. ನದಿಯಲ್ಲಿ ನೀರಿನ ಕೊರತೆ ಹಾಗೂ ವಿದ್ಯುತ್ ಸಮಸ್ಯೆಯಾದರೆ ಮಾತ್ರ ನೀರಿನ ಕ್ಷಾಮ ಉಲ್ಭಣಗೊಳ್ಳಲಿದೆ. ಉಳಿದಂತೆ ಎಲ್ಲ ಹಳ್ಳಿಗಳಿಗೆ ಬೊರವೆಲ್ ನೀರೆ ಗತಿಯಾಗಿದೆ.

ಈಗಾಗಲೆ ಜಿ.ಪಂ ಇಲಾಖೆಯಲ್ಲಿ ಇದುವರೆಗೆ 53 ಹಳ್ಳಿಗಳ ಜನತೆ ನೀರಿನ ಸಮಸ್ಯೆಯ ಬಗ್ಗೆ ದೂರು ನೀಡಿದ್ದು, ಇದನ್ನು ಶಾಶ್ವತವಾಗಿ ಬಗೆಹರಿಸಲು ಬರೋಬ್ಬರಿ 1 ಕೋಟಿ ರೂ ಅನುದಾನ ಬೇಕಾಗಿದ್ದು, ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಜಿ.ಪಂ ಸಹಾಯಕ ಇಂಜನೀಯರ್. ಉಳಿದಂತೆ ತಾಲೂಕಿನ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯ ಬಗ್ಗೆ ತಹಸೀಲ್ದಾರ ನೇತೃತ್ವದಲ್ಲಿ ಜಿ.ಪಂ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್, ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳ ಸಮ್ಮುಖದಲ್ಲಿ ವಾರಕ್ಕೊಮ್ಮೆ ಟಾಸ್ಕ್ ಪೋರ್ಸ ಸಮೀತಿಯ ಸಭೆ ಜರುಗುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಯಾವ ಹಳ್ಳಿಗಳಲ್ಲೂ ಬೋರೆವೆಲ್ ಕೊರೆಸಲು ಹೋದರೂ ನೀರು ಸಿಗುತ್ತಿಲ್ಲ ಹಾಗೂ ಒಂದು ಬೋರವೆಲ್ ಕೊರೆಸಲು ಬರೋಬ್ಬರಿ 2 ಲಕ್ಷ ರೂ ವರೆಗೆ ಖರ್ಚಾಗುತ್ತದೆ. ಕಾರಣ ಖಾಸಗಿ ಬೊರವೆಲ್ ಅವರಿಂದ ನೀರನ್ನು ಪಡೆದು ತಿಂಗಳಿಗೆ 8 ಸಾವಿರ ರೂಗಳ ಬಾಡಿಗೆ ನೀಡಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈಗಾಗಲೆ 10 ಲಕ್ಷ ರೂ ಕುಡಿಯುವ ನೀರಿಗಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಅಗತ್ಯ ಬಿದ್ದಲ್ಲಿ ತ್ವರತಿಗತಿಯಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ.
ನೀರಿನ ಗಂಭೀರ ಸಮಸ್ಯೆ ಇರುವ ಹಳ್ಳಿಗಳ ವಿವಿರ: ಎರಡು ತಾಲೂಕಿನ ಕುಂಚೂರು, ಹೊಸನಿಡನೇಗಿಲು, ಚಿನ್ನಮುಳಗುಂದ ತಾಂಡಾ, ಯತ್ತಿನಹಳ್ಳಿ ಎಂ.ಎಂ ತಾಂಡಾ, ವರಹಾ, ಹಿರೇಬೂದಿಹಾಳ ಸೇರಿದಂತೆ 18 ಹಳ್ಳಿಗಳು.

ಇನ್ನು ದೂದಿಹಳ್ಳಿ ಗ್ರಾಮದ ಕೆಲವು ಭಾಗಗಳಲ್ಲಿ ನೀರು ಚರಂಡಿಗೆ ಪೋಲಾಗುತ್ತಿದ್ದರೆ ಇನ್ನು ಕೆಲವು ಭಾಗದ ಓಣಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ದಿನವಿಡಿ ನೀರಿಗಾಗಿ ಪರಿತಪಿಸುವಂತಾಗಿದೆ. ಹೊಲಬಿಕೊಂಡ ಗ್ರಾಮದಲ್ಲಿ ನೀರಿಗಾಗಿ ಬೊರವೆಲ್ ಗತಿಯಾಗಿದ್ದು, ಕುಡಿಯುವ ನೀರಿಗಾಗಿ ಇದ್ದ ಒಂದು ಶುದ್ಧಕುಡಿಯುವ ನೀರಿನ ಘಟಕವನ್ನು ಕಳೆದ 2.5 ತಿಂಗಳಿನಿಂದ ನೀರಿನ ಸಮಸ್ಯೆಯ ನಾಮಫಲಕ ಹಾಕಿ ಬಂದ್ ಮಾಡಲಾಗಿದೆ. ಇದರಿಂದ ಜನತೆ ಸೇರಿದಂತೆ ಚಿಕ್ಕಮಕ್ಕಳು ಅನಾರೋಗ್ಯದಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ.
***

ಪಟ್ಟಣದಲ್ಲಿ 3356 ನಳಗಳಿವೆ. 24 ಕಿರು ನೀರು ಸಂಗ್ರಹ ಘಟಕಗಳಿದ್ದು, ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಕಸ್ಮಾತ್ ನದಿಯಲ್ಲಿ ನೀರು ಸಿಗದೆ ಇದ್ದಲ್ಲಿ, ಈಗಾಗಲೆ 46 ಕೊಳವೆಬಾವಿಗಳಿದ್ದು, ಇದರಿಂದ ಜನತೆಗೆ ನೀರಿನ ಸಮಸ್ಯೆ ಎದುರಾಗದಂತೆ ನೀರು ಸರಬರಾಜು ಮಾಡಲಾಗುವುದು. ಈಗ ಸರಬರಾಜು ಮಾಡುತ್ತಿರುವ ನೀರನ್ನು ಮಿತವ್ಯಯವಾಗಿ ಬಳಕೆ ಮಾಡಿಕೊಳ್ಳಬೇಕು ಹಾಗೂ ನೀರು ಪೋಲಾಗದಂತೆ ಸಾರ್ವಜನಿಕರು ಎಚ್ಚರವಹಿಸಬೇಕು ಈ ಕುರಿತು ಧ್ವನಿವರ್ದಕಗಳ ಮೂಲಕ ಪಟ್ಟಣದಲ್ಲಿ ಜಾಗ್ರತಿ ಮೂಡಿಸಲಾಗುವುದು. –ರಾಜಾರಾಮ್ ಪವಾರ, ಪಪಂ ಮುಖ್ಯಾಧಿಕಾರಿ

***
ಈಗಾಗಲೆ ಜಿಲ್ಲಾಧಿಕಾರಿಗಳ ಆದೇಶದಂತೆ ತಾ.ಪಂ ಇಓ, ಜಿ.ಪಂ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್, ಪ.ಪಂ ಮುಖ್ಯಾಧಿಕಾರಿಗಳು, ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳ ಸಮ್ಮುಖದಲ್ಲಿ ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ. 18 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯ ಕುರಿತು ದೂರು ಬಂದಿದ್ದು, 10 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ನೀರಿನ ಸಮಸ್ಯೆಯಾಗದಂತೆ ತ್ವರಿತಗತಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು. –ವಿವೇಕವಾಸುದೇವ ಶೆಣ್ವೆ, ತಹಸೀಲ್ದಾರ
***

ರಾಜ್ಯ ಉತ್ತರಕರ್ನಾಟಕ ಅನ್ನದಾತರ ಸೇನೆಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ: ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಅದು ನೀರಿನ ಸಮಸ್ಯೆ ಕಾರಣ ಹೇಳಿ ಬಂದ್ ಮಾಡಲಾಗಿದೆ. ಈ ಸಂಬಂಧ ಈಗಾಗಲೆ ಗ್ರಾಮಸಭೆಗಳಲ್ಲಿ ತಿಳಿಸಲಾಗಿದೆ ಹಾಗೂ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ ಆದರೂ ಪ್ರಯೋಜನವಾಗಿಲ್ಲ. ಇದರಿಂದ ಪ್ಲೋರೈಡ್ ನೀರು ಕುಡಿದು ಗ್ರಾಮದ ಜನತೆ ಆನಾರೋಗ್ಯದಿಂದ ಬಳಲುವಂತಾಗಿದೆ.

loading...