ದೇವನಾಗರಿ ಲಪಿ ಎನಿಸಿಕೊಂಡ ಸಂಸ್ಕøತ ಭಾಷೆಗೆ ಇತಿಹಾಸವಿದೆ: ಭಟ್ಟ

0
23
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ದೇವನಾಗರಿ ಲಪಿ ಎನಿಸಿಕೊಂಡ ಸಂಸ್ಕøತ ಭಾಷೆಗೆ ಇತಿಹಾಸವಿದೆ. ಪಾಜ್ಞನರು ಪಂಡಿತ ಪಾಮರರ ಮೇಧಾವಿಗೆ ಈ ಭಾಷೆಯ ಕೊಡುಗೆ ಅನನ್ಯ. ಇಂತಹ ಮೇರು ಭಾಷೆಯನ್ನು ಕರಗತ ಮಾಡಿಕೊಂಡು, ಸುಲಲಿತವಾಗಿ ಸಂಸ್ಕøತದ ಸಂಭಾಷಣೆಯನ್ನು ನಿವೇದಿಸುವ ಇಪ್ಪತ್ತಾರರ ತರುಣ ಯಲ್ಲಾಪುರದ ನಾರಾಯಣಗೆರೆಯ ಕಿರಣ ಭಟ್ಟ ಹಳ್ಳಿಗಾಡಿನ ಅದ್ಭುತ ಪ್ರತಿಭೆ.
ಯಲ್ಲಾಪುರ ಸಮೀಪದ ನಾರಾಯಣಗೆರೆಯ ಹಳ್ಳಿಯ ಕೃಷಿಕ ಶಂಕರ ಭಟ್ಟ, ಮತ್ತು ಸರಸ್ವತಿ ಭಟ್ಟರ ಪುತ್ರ ಕಿರಣ ಭಟ್ಟ ,ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಓದಿ, ನಂತರ ದೆಹಲಿಯ ರಾಷ್ಟ್ರೀಯ ಸಂಸ್ಕøತ ಸಂಸ್ಥಾನ ಪದವಿ ಪೂರ್ವ ವಿದ್ಯಾಭ್ಯಾಸ ಕೈಗೊಂಡರು. ನಂತರ ಆಂಧ್ರದ ತಿರುಪತಿಯ ವಿದ್ಯಾಪೀಠದಲ್ಲಿ ಕ್ರಮವಾಗಿ ಸಂಸ್ಕøತ ಭಾಷೆಯಲ್ಲಿ ಪದವಿ, ಬಿ ಎಡ ಶಿಕ್ಷಣ ಪಡೆದು, ಎಮ್ ಎ ಮುಗಿಸಿ ಆಚಾರ್ಯ ಪದವಿ ಪಡೆದರು.

ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದ ಕಿರಣನಿಗೆ ಬಾಲ್ಯದಿಂದಲೇ ಸಂಸ್ಕøತ ಭಾಷಾ ಪ್ರೇಮ ತೀವೃವಾಗಿತ್ತು .ಸತತವಾಗಿ ಈ ಭಾಷೆಯೊಂದಿಗೆ ಸಂವಹನಗೊಂಡವನಿಗೆ ಅನೇಕ ಸಂಭಾಷಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದ. ಉತ್ತಮವಾದ ಭಾಷಾ ನಿರೂಪಣೆಯಿಂದ ಬೆಂಗಳೂರಿನಲ್ಲಿ ಕೆಲಕಾಲ ಅಕ್ಷರಂನ ಸಂಸ್ಕøತ ಭಾಷಾ ಶೈಕ್ಷಣಿಕ ಸಸ್ಥೆಯಲ್ಲಿ ಕೆಲಸಮಾಡಿದ ನಂತರ ತಮ್ಮ ಓದಿನಲ್ಲಿ ಎಲ್ಲರಿಗಿಂತ ಮುಂದೆ ಇದ್ದಾರೆ. ತಿರುಪತಿ ಮತ್ತು ಉಜ್ಜಯನಿ,ಭೂಪಾಲ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳು ಇವರ ಪ್ರತಿಭೆ ಗುರುತಿಸಿ ಆರು ಚಿನ್ನದ ಪದಕ ನೀಡಿದೆ. ಸಂಸ್ಕøತ ಭಾರತಿಯ ಸೇವಾ ಪುರಸ್ಕಾರಗಳನ್ನು ಪಡೆದ ಕಿರಣ ಭಟ್ಟರ ಮಾತು ನಗುವಿನಲ್ಲಿ ಆಕರ್ಷಣೀಯವಾದ ಲವಲವಿಕೆ ಇದೆ. ಭಾಷೆಯನ್ನು ಪ್ರಸ್ತುತ ಪಡಿಸುವ, ಉತ್ತಮ ವಾಗ್ಮಿಯ ಲವಲವಿಕೆಯ ಚೈತನ್ಯವಿದೆ. ಇದೇ ಕಾರಣದಿಂದ ಸಂಸ್ಕøತ ಭಾಷೆಯನ್ನು ಎಲ್ಲರಿಗೂ ಆಪ್ತವಾಗುವ ಹಾಗೆ ನಿವೇದಿಸಬಲ್ಲರು. ಕಾಲೇಜುಗಳಲ್ಲಿ ವಿವಿಧ ತರಬೇತಿ ಶಿಬಿರದ ಹೊರತಾಗಿ, ಅನೇಕ ಭಾಷಾ ಕಮ್ಮಟ, ನೈತಿಕ ಶಿಕ್ಷಣ ಕಾರ್ಯಾಗಾರ, ವಿವಿಧೆಡೆ ಪ್ರವಾಸದೊಂದಿಗೆ ಸಂಸ್ಕøತ ಬಾಷೆಯ ಪ್ರಚಾರಕರಾಗಿ ದೇಶ ವಿದೇಶ ತಿರುಗಿದ್ದಾರೆ. ಮಾತೃಭಾಷೆ ಕನ್ನಡ ಬಾಷೆಯೊಂದಿಗೆ ವೃತ್ತಿ ಭಾಷೆ ಸಂಸ್ಕøತ,ಇಂಗ್ಲೀಷ್, ತೆಲಗು ಭಾಷೆಯಲ್ಲಿ ಪ್ರಭುತ್ವತೆಯನ್ನು ಹೊಂದಿದ್ದಾರೆ.

loading...