ದೇವಸ್ಥಾನದಲ್ಲಿ ಸಭೆ : ಬೇವಿನಮರದ ನೋಟಿಸ್

0
16
loading...

ಶಿಗ್ಗಾವಿ : ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಸಭೆ ನಡೆಸಿದ ಆರೋಪದ ಮೇಲೆ ವಿ.ಪ ಸದಸ್ಯ ಸೋಮಣ್ಣ ಬೇವಿನಮರದ ಅವರಿಗೆ ಚುನಾವಣಾ ಅಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಪರೀಕ್ಷಾರ್ಥ ತಹಶೀಲ್ದಾರ ಅಧಿಕಾರಿ ಶ್ರೀಧರ್ ಸುದ್ದಿಗಾರರೊಂದಿಗೆ ಮಾತನಾಡಿ, ಏ. 12 ರಂದು ಕಾರಡಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಮಧುವೆ ಸಮಾರಂಭದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಬೇವಿನಮರದ ಅವರು ಚುನಾವಣಾ ಭಾಷಣ ಮಾಡಿದ್ದರು, ಈ ಬಗ್ಗೆ ಸೆಕ್ಟರ್ ಅಧಿಕಾರಿಗಳು ವರದಿ ಸಲ್ಲಿಸಿದ್ದರು, ಅಲ್ಲದೇ ಅನಾಮದೇಯರಿಂದ ಲಭ್ಯವಾದ ವಿಡಿಯೋ ಚೀತ್ರೀಕರಣದ ತುಣುಕುಗಳನ್ನು ಪರೀಶಿಲಿಸಿ ಅವರಿಗೆ ನೋಟೀಸ್ ನೀಡಲಾಗಿದೆ ಎಂದರು, ಸಭೇಯಲ್ಲಿ ನೀತಿ ಸಂಹಿತೆ ಕಾನೂನುಗಳನ್ನು ಉಲ್ಲಂಘಿಸಿ ಭಹಿರಂಗವಾಗಿ ಚುನಾವಣೆಗೆ ಸಂಭಂದಿಸಿದ ವಿಷಯಗಳನ್ನು ಪ್ರಸ್ತಾಪಿಸಿದ್ದರು, ಅಲ್ಲದೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಹೇಳಿಕೆಯನ್ನು ಹೇಳಿದ್ದಲ್ಲದೆ ಕಾರ್ಯಕರ್ತರ ಸಭೆ ನಡೆಸಿದ್ದನ್ನು ಪರೀಶೀಲಿಸಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

loading...