ದೇವೆಗೌಡರು ಕಾಶ್ಮೀರ ಸಮಸ್ಯೆ ಬಗೆಹರಿಸುತ್ತಿದ್ದರು: ಮಟಗಿ

0
21
loading...

ಮೂಡಲಗಿ: ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ತಮ್ಮ ಅವಧಿಯಲ್ಲಿ ಇನ್ನೂ ಒಂದು ವರ್ಷ ಮುಂದುವರಿದಿದ್ದರೆ ಕಾಶ್ಮೀರದ ಸಮಸ್ಯೆ ಬಗೆಹರಿಸುತ್ತಿದ್ದರು ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ ಅಬ್ದುಲ್ಲಾ ತುಮಕೂರಿನಲ್ಲಿ ನಡೆದ ಸಭೆಯಲ್ಲಿ ಹೇಳಿದ್ದರು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಶ್ಪಾಕ್ ಮಟಗಿ ಹೇಳಿದರು.

ಅವರು ಸ್ಥಳೀಯ ಬಸವ ರಂಗ ಮಂಟಪದಲ್ಲಿ ಸೋಮವಾರ ಸಂಜೆ ಅಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳೂ ದ್ವೇಷ ಮತ್ತು ಮತ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು ಬಡವರ, ರೈತರ ಬಗ್ಗೆ ಗಮನಹರಿಸುತ್ತಿಲ್ಲ. ರೈತರ ಅಭ್ಯುದಯಕ್ಕಾಗಿ ಮೆ.12ಕ್ಕೆ ನಡೆಯುವ ವಿಧಾನಸಭಾ ಚುನವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಜಾತ್ಯಾತೀತ ಜನತದಳ ಪಕ್ಷದ ಅಭ್ಯರ್ಥಿ ಪ್ರಕಾಶ ಸೋನವಾಲ್ಕರ್ ಮಾತನಾಡಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರ ಸ್ವಾಮಿಯವರು ನಮ್ಮ ಮೇಲೆ ವಿಶ್ವಾಸವನ್ನಿಟ್ಟು ಈ ಬಾರಿಯ ಚುನವಣೆ ಸ್ಪರ್ಧಿಸಲೂ ಟಿಕೇಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಸ್ಥಳೀಯ ಸ್ವತಂತ್ರ ಅಭ್ಯರ್ಥಿಯಾಗಿ ಘೋಷಣೆ ಮಾಡಿಕೊಂಡ ಭೀಮಪ್ಪ ಗಡಾದರವರು ಜೆಡಿಎಸ್ ಪಕ್ಷ ಸೇರುವ ಹಂಬಲ ವ್ಯಕ್ತ ಪಡಿಸಿದ್ದು, ಅವರು ಅರಬಾಂವಿ ಕ್ಷೇತ್ರದ ಹಾಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸೋಲಿಸುವ ಒಂದೇ ಗುರಿ ಹೊಂದದೇ ಜೆಡಿಎಸ್ ಪಕ್ಷದ ತತ್ವಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷ ಸೇರುವುದಾದರೆ ಅವರನ್ನು ಬೆಂಬಲಿಸುವುದಾಗಿ ಹೇಳಿದರು.

ರಾಜ್ಯ ಉಪಾಧ್ಯಕ್ಷ ಪಿ.ಎಫ್. ಪಾಟೀಲ, ಗಂಗಾಧರಯ್ಯ ಹಿರೇಮಠ, ಗುರು ಹುಳ್ಳೆರ ಮಾತನಾಡಿದರು. ಜೆಡಿಎಸ್ ಅರಬಾಂವಿ ಘಟಕದ ಅಧ್ಯಕ್ಷ ಚೆನ್ನಪ್ಪ ವಗ್ಗನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಗುಂಡಪ್ಪ ಕಮತೆ, ಗುರುರಾಜ್ ಹಿಟ್ಟಣಗಿ, ಸತೀಶ ವಂಟಗೊಡಿ, ಬಾಳಯ್ಯ ಹಿರೇಮಠ, ಸುಭಾಸ್ ಪೂಜೇರಿ, ಲಕ್ಷ್ಮಣ ಕೋಳಿ, ಮಲ್ಲಿಕಾರ್ಜುನ ಅರಬಾಂವಿ, ಪಾರೀಶ್ ಉಪ್ಪಿನ, ರಾಜೇಂದ್ರ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.

loading...