ದೇಶದ ಬೆಳವಣಿಗೆ ಬಂದರು ಪಾತ್ರ ಪ್ರಮುಖ: ದಿಕ್ಷೀತ್

0
17
loading...

ಕನ್ನಡಮ್ಮ ಸುದ್ದಿ-ಕಾರವಾರ: ದೇಶದ ಕೈಗಾರಿಕೆಗಳ ಆರ್ಥಿಕ ಬೆಳವಣಿಗೆಗೆ ಬಂದರು ಪಾತ್ರ ಪ್ರಮುಖವಾಗಿದ್ದು ಅದು ಅಭಿವೃದ್ಧಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಾಲೂಕಿನ ಬಿಣಗಾ ಗ್ರಾಸೀಮ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಬಿ.ಬಿ.ದಿಕ್ಷೀತ್ ಹೇಳಿದರು.
ಅವರು ಬೈತ್‍ಖೊಲ್ ಬಂದರು ಇಲಾಖೆ ಕಚೇರಿ ಆವರಣದಲ್ಲಿ ನಡೆದ 55ನೇ ರಾಷ್ಟ್ರೀಯ ನಾವಿಕ ದಿನಾಚರಣೆಯಲ್ಲಿ ಮಾತನಾಡಿ ದೇಶದ ಬೆಳವಣಿಗೆ ಕೈಗಾರಿಕೆಗಳು ಕೈಗೂಡಿಸುತ್ತವೆ. ಇಂತಹ ಕೈಗಾರಿಕೆಗಳ ಆಮದು ಮತ್ತು ರಫ್ತುಗಳಿಗೆ ಬಂದರುಗಳು ಬೆನ್ನಲುಬಾಗಿ ನಿಂತು ಕಾರ್ಯನಿರ್ವಹಿಸುತ್ತವೆ. ಇದರಿಂದ ಕೈಗಾರಿಕೆಗಳ ವ್ಯಾಪಾರ ಸುಗಮವಾಗಿ ದೇಶದ ಸಂಪತ್ತು ಸಮೃದ್ಧಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಹುಮಾನ ವಿತರಣೆ : 55ನೇ ರಾಷ್ಟ್ರೀಯ ನಾವಿಕ ದಿನಾಚರಣೆಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಖಾಸಗಿ ಹಡಗು ಕಂಪನಿಗಳಿಗೆ ಬಹುಮಾನ ವಿತರಿಸಲಾಯಿತು. ವರ್ಷದ ಅತ್ಯುತ್ತಮ ಸ್ಟೀಮರ್ ಏಜೆಂಟ್ ಪುರಸ್ಕಾರವನ್ನು ಮರೈನ್ ಲಿಂಕ್ಸ್ ಕಾರವಾರ ಪಡೆದುಕೊಂಡಿತು. ಓವರ್ ಆಲ್ ಪರಫಾಮನ್ಸ್‍ಇನ್ ಲಿಕ್ವಿಡ್ ಕಾರಗೋಸ್ ಸ್ಟೋರೆಜ್ ಟ್ಯಾಂಕ್ ಪ್ರಸಸ್ತಿಯನ್ನು ಕಾರವಾರದ ಟ್ರೋಪಿಕನಾ ಲಿಕ್ವೀಡ್ ಸ್ಟೋರೇಜ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿತು. ಬೆಸ್ಟ್‍ಕಸ್ಟಮ್ ಹೌಸ್‍ಏಜೆಂಟ್ ಪ್ರಸಸ್ತಿಯನ್ನು ಕಾರಗೋ ಲಿಂಕ್ಸ್ ಕಾರವಾರವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಂದರು ಅಧಿಕಾರಿ ಕ್ಯಾಪ್ಟನ್ ಅರುಣ ಗಾಂವಕರ್ ಸ್ವಾಗತಿಸಿದರು. ಮೆರಿಲೈನ್ ಶಿಪ್ಪಿಂಗ್ ಏಜನ್ಸಿಸ್ ಮತ್ತು ಕಾರಗೋ ಲಿಂಕ್ಸ್‍ನ ಪ್ರಧಾನ ಪಾಲುದಾರರಾದ ಜೀತನ್ ಸಿಕ್ವೇರಾ, ಇಂಡಿಯನ್ ಕೊಸ್ಟ್‍ಗಾರ್ಡ ಕಾರವಾರ ಸ್ಟೇಶನ್‍ನ ಅವೀನಾಶ ಚಿಟಗುಪ್ಪಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

loading...