ದೇಶಪಾಂಡೆಯರಿಂದ ಬಿರುಸಿನ ಪ್ರಚಾರ

0
11
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಸಚಿವ ದೇಶಪಾಂಡೆಯವರು ನಗರ ವಿವಿಧ ವಾರ್ಡ್‍ಗಳಲ್ಲಿ ಪಕ್ಷದ ಗೆಲುವಿಗಾಗಿ ಬಿರುಸಿನ ಪ್ರಚಾರ ಕೈಗೊಂಡರು. ನಗರದ ಬೈಲುಪಾರು, ಹಳೆದಾಂಡೇಲಿ, ಮಾರುತಿ ನರ, ಗಾಂಧಿನಗರ, ವನಶ್ರೀನಗರ ಮೊದಲಾದ ಕಡೆಗಳಲ್ಲಿ ಮತ ಪ್ರಚಾರ ಕೈಗೊಂಡ ದೇಶಪಾಂಡೆಯವರು ತನ್ನ ಅವಧಿಯ ಸಾಧನೆಗಳನ್ನು ವಿವರಿಸಿ, ಭವಿಷ್ಯದಲ್ಲಿ ಈ ಕ್ಷೇತ್ರದ ಪುರೋ ಅಭಿವೃದ್ಧಿಗೆ ಶ್ರಮಿಸಲು, ಅಮೂಲ್ ಅವಕಾಶ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳುಂಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಬಸೀರ್ ಗಿರಿಯಾಲ, ನಗರ ಸಭಾ ಸದಸ್ಯರುಗಳಾದ ಕೀರ್ತಿ ಗಾಂವಕರ, ಅನಿಲ್ ದಮಡಗಲ್, ನಂದೀಶ ಮುಂಗರವಾಡಿ, ಅಡಿವೆಪ್ಪ ಭದ್ರಕಾಳಿ, ಮಂಜು ರಾಥೋಡ, ರಾಮಲಿಂಗ ಜಾಧವ, ಎಂ.ಆರ್.ನಾಯ್ಕ ಹಾಗೂ ಪಕ್ಷದ ಮುಖಂಡರುಗಳಾದ ಇಕ್ಬಾಲ ಶೇಖ, ಎಸ್.ಎಸ್.ಪೂಜಾರ, ಆದಂ ದೇಸೂರು, ದಿವಾಕರ ನಾಯ್ಕ, ಮೋಹನ ಹಲವಾಯಿ, ಅವಿನಾಶ ಗೋಡಕೆ, ಮೌಲಾಲಿ ಮುಲ್ಲಾ, ಮೋಜಸ್, ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.

loading...