ದೇಶಿ ಮದ್ಯ ಮಾರಾಟಗಾರನ ಬಂಧನ

0
24
loading...

ಅಥಣಿ 12: ಮಹಾರಾಷ್ಟ್ರದ ದೇಶಿದಾರು ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಅಥಣಿ ಅಬಕಾರಿ ನಿರೀಕ್ಷರು ಮತ್ತು ಸಿಬ್ಬಂದಿ ಆರೋಪಿಯಿಂದ 32 ಬಾಟಲ ದೇಶಿದಾರು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಮಲಾಬಾದ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಯೇ ಅಕ್ರಮ ಸರಾಯಿ ಮಾರುತ್ತಿದ್ದ ಅದೇ ಗ್ರಾಮದ ರಾಮು ಹಣಮಂತ ಹುಂಡೇಕರ(56) ಎಂಬಾತನನ್ನು ವಶಕ್ಕೆ ಪಡೆದ ಅಧಿಕಾರಿಗಳು 180 ಮಿ.ಲೀ.ನ 32 ಬಾಟಲಗಳನ್ನು ವಶಪಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಇಂದು ಬುಧವಾರ ಕೊಟ್ಟಲಗಿ ಚೆಕಪೋಸ್ಟನಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶಿಂಧಿ(ಕಳ್ಳ ಬಟ್ಟಿ ಸರಾಯಿ) ಸಾಗಿಸುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಒಂದು ದ್ವಿಚಕ್ರ ವಾಹನ ಮತ್ತು 9 ಲೀಟರ ಶಿಂಧಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಈ ದಾಳಿಯಲ್ಲಿ ಅಥಣಿ ಅಬಕಾರಿ ನಿರೀಕ್ಷಕ ಶ್ರೀಶೈಲ ಅವಜಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

loading...