ದ್ವೇಷವನ್ನು ಮರೆಸುವದೇ ಜಾತ್ರೆಯ ವೈಶಿಷ್ಟ್ಯ: ಪಿ.ರಾಜೀವ

0
34
loading...

ಪಾಲಬಾವಿ 04: ಪಾಲಕರು ಮಕ್ಕಳಿಗೆ ಉತ್ತಮ, ಉನ್ನತವಾದ ಶಿಕ್ಷಣ ನೀಡಬೇಕು ಕನಿಷ್ಟವಾದರೂ ಪದವಿ ವರೆಗೆ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕು. ಕದಿಯಲಾದರ ಸಂಪತ್ತು ಶಿಕ್ಷಣ. ನಮ್ಮಲ್ಲಿರುವ ರಾಗ, ದ್ವೇಷವನ್ನು ಮರೆಸುವದೇ ಹಬ್ಬಗಳ ಹಾಗೂ ಜಾತ್ರೆಗಳ ಮುಖ್ಯ ಗುರಿಯಗಿದ್ದು. ಹಳೆಯ ಹಗೆತನವನ್ನು ಮರೆತು ಹೊಸ ಹುಮ್ಮಸ್ಸಿನಿಂದ ಪರಸ್ಪರ ಸಿಹಿ ತಿನ್ನಿಸಿ ಆನಂದವಾಗಿರುವ ಸ್ನೇಹನ್ನು ಬೆಸೆಯುವದೇ ಜಾತ್ರೆಯ ಮೂಲಮಂತ್ರವಾಗಿದೆ ಎಂದು ಶಾಸಕ ಪಿ.ರಾಜೀವ ಹೇಳಿದರು.

ಗ್ರಾಮದ ಲೋಕನ್ನವರ ತೋಟದಲ್ಲಿರುವ ಶ್ರೀ ಏಳು ಮಕ್ಕಳತಾಯಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಕಮಿಟಿಯವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿವಲಿಂಗ ಕೌಜಲಗಿ, ಭರಮಪ್ಪ ಮಾನಶೆಟ್ಟಿ, ದುಂಡಪ್ಪ ನಾಗನೂರ, ಗುರುನಾಥ ಜುಂಜರವಾಡ, ಭರಮಪ್ಪ ನಿಂಗನೂರ, ರವಿ ಠಕ್ಕನ್ನವರ, ಲಕ್ಷ್ಮಣ ತೇರದಾಳ, ಬಸಪ್ಪ ಕಾಡಶೆಟ್ಟಿ, ಯಲ್ಲಪ್ಪ ಮಾನಶೆಟ್ಟಿ, ಶಿವಲಿಂಗ ಮುಸಿ ಇದ್ದರು

loading...