ಧರ್ಮ ರಕ್ಷಣೆಯಿಂದ ಉನ್ನತಿ ಸಾಧ್ಯ: ಪೂಜಾರಿ

0
12
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಧರ್ಮ ರಕ್ಷಣೆಯಿಂದ ಉನ್ನತಿ ಸಾಧ್ಯ. ಧರ್ಮವನ್ನು ರಕ್ಷಿಸಿದಾಗ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಧಾರ್ಮಿಕವಾಗಿ ನಾವು ಶೃದ್ದಾ ಭಕ್ತಿಯಿಮದ ಭಗವಂತನನ್ನು ಆರಾಧಿಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ನಗರದ ದಾಂಡೇಲ್ಪಪ್ಪಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಕೃಷ್ಣ ಪೂಜಾರಿ ನುಡಿದರು.
ಅವರು ಭಾನುವಾರ ರಾತ್ರಿ ನಗರದ ಶ್ರೀ ದಾಂಡೇಲಪ್ಪಾ ದೇವಸ್ಥಾನದಲ್ಲಿ ಗೋವಾದ ಪೂಜ್ಯ. ಶ್ರೀ ಸದ್ಗುರು ಶ್ರೀ ಬ್ರಹ್ಮೇಶಾನಂದ ಅವರ ಮಠದ ವತಿಯಿಂದ ಹಮ್ಮಿಕೊಂಡ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸದ್ಗುರು ಶ್ರೀ ಬ್ರಹ್ಮೇಶಾನಂದ ಸ್ವಾಮೀಜಿಯವರು ಮನುಕುಲದ ಒಳಿತಿಗಾಗಿ ಧರ್ಮ ಸಂಸ್ಥಾಪನೆ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಕೃಷ್ಣ ಪೂಜಾರಿ ಹೇಳಿದರು. ಸದ್ಗುರು ಶ್ರೀ ಬ್ರಹ್ಮೇಶಾನಂದ ಸ್ವಾಮೀಜಿಯವರ ಮಠದ ಉಪನ್ಯಾಸಕ ಜ್ಞಾನೇಶ್ವರ ಪಾಟೀಲ ಅವರು ಮಾತನಾಡಿ ಗೋವಾ ಸದ್ಗುರು ಶ್ರೀ ಬ್ರಹ್ಮೇಶಾನಂದ ಸ್ವಾಮೀಜಿಯವರ ಮಠದ ಮೂಲಕ ನಡೆಯುವ ಭಕ್ತಿ ಕಾರ್ಯಕ್ರಮಗಳನ್ನು ವಿವರಿಸಿ, ದೇವಾಲಯ, ಮಂದಿರಗಳ ರಕ್ಷಣೆ ಮತ್ತು ಆರಾಧನೆಯ ಅಗತ್ಯತೆಯನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ವಾಮನ ಮಿರಾಶಿ, ದಾಂಡೇಲಪ್ಪಾ ದೇವಸ್ಥಾನದ ಅನಂತ ವಿಠೋಭ ಮಿರಾಶಿ, ಪತ್ರಕರ್ತ ಸಂದೇಶ್‌.ಎಸ್‌.ಜೈನ್‌, ಆರ್‌.ಎಸ್‌.ಎಸ್‌ ಪ್ರಮುಖ ದಯಾನಂದ ಮರಾಠೆ, ಕಲಾವತಿ ಮಂದಿರ ಪ್ರಮುಖೆ ಅನುರಾಧ ಕೃಷ್ಣ ವೆರ್ಣೇಕರ ಮೊದಲಾದವರು ಸದ್ಗುರು ಶ್ರೀ ಬ್ರಹ್ಮೇಶಾನಂದ ಸ್ವಾಮೀಜಿಯವರ ಸೇವಾ ಕೈಂಕರ್ಯಗಳನ್ನು ಕೊಂಡಾಡಿದರು.
ಸದ್ಗುರು ಶ್ರೀ ಬ್ರಹ್ಮೇಶಾನಂದ ಸ್ವಾಮೀಜಿ ಮಠದ ಸ್ಥಳೀಯ ನಗರದ ಘಟಕದ ಪ್ರಮುಖ ಮಂಜುನಾಥ ವಾಯಗಣಕರ ಅವರು ದೇವಸ್ಥಾನ, ಮಂದಿರಗಳ ರಕ್ಷಣೆಯ ಕುರಿತಾಗಿ, ದೇವಸ್ಥಾನಗಳ ಪ್ರಮುಖರಿಗೆ ಗೌರವಪೂರ್ವಕವಾಗಿ ಸನ್ಮಾನಿಸುವ ಮೂಲಕ ಧಾರ್ಮಿಕ ಮಂದಿರಗಳನ್ನು ಸದೃಢಗೊಳಿಸುವ ಚಿಂತನೆಯೆ ಈ ಕಾರ್ಯಕ್ರಮದ ಉದ್ದೇಶ ಎಂದರು. ವೇದಿಕೆಯಲ್ಲಿ ಸದ್ಗುರು ಶ್ರೀ ಬ್ರಹ್ಮೇಶಾನಂದ ಸ್ವಾಮೀಜಿ ಮಠದ ನಿವೃತ್ತಿ ಪಾಟೀಲ, ವೈಜನಾಥ ಗುರವ, ನಾಮದೇವ ಗುರುವ, ರಘುನಾಥ ಉತ್ತುರಕರ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ದೇವಸ್ಥಾನಗಳ ಪ್ರಮುಖರಿಗೆ ಸನ್ಮಾನಿಸಲಾಯಿತು. ರಘುನಾಥ ಉತ್ತುರಕರ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಕೈಲಾಸ ಉತ್ತುರುಕರ ವಂದಿಸಿದರು. ಗುರುದಾಸ ಗವಸ ಕಾರ್ಯಕ್ರಮ ನಿರೂಪಿಸಿದರು.

loading...