ನಂದಗಡದ ರಾಯಣ್ಣ ಸಮಾಧಿಗೆ ಅಮಿತ ಶಾ ಭೇಟಿ

0
32
loading...

ಖಾನಾಪುರ: ತಾಲೂಕಿನ ನಂದಗಡದ ರಾಯಾಪುರದಲ್ಲಿರುವ ಶೂರ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಶುಕ್ರವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಭೇಟಿ ನೀಡಿದರು. ಕಿತ್ತೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ನಂದಗಡಕ್ಕೆ ಆಗಮಿಸಿದ ಅವರು, ಪಕ್ಷದ ರಾಜ್ಯ ಮಟ್ಟದ ನಾಯಕರು ಮತ್ತು ಸ್ಥಳೀಯ ಮುಖಂಡರೊಂದಿಗೆ ಸಮಾಧಿಗೆ ತೆರಳಿ ರಾಯಣ್ಣನಿಗೆ ಗೌರವ ಅರ್ಪಿಸಿದರು. ಸ್ಥಳೀಯರಿಂದ ರಾಯಣ್ಣನ ಜೀವನ ಸಾಧನೆ ಮತ್ತು ಸಮಾಧಿಯ ಮಹಿಮೆಯ ಬಗ್ಗೆ ಅವರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದ ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಸಂಜಯ ಪಾಟೀಲ, ಪಕ್ಷದ ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

loading...