ನನಗೆ ಬಿಜೆಪಿ ಟಿಕೇಟ್ ಖಚಿತ : ಅಶೋಕ

0
16
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : 1975 ರಿಂದ ನಾನು ಕಾಂಗ್ರೇಸ್ ವಿರೋಧಿಯಾಗಿ ಜನತಾ ಪಾರ್ಟಿ ಹಾಗೂ ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಶ್ರಮಿಸಿದ್ದೆನೆ. ಈ ಬಾರಿ ಬಿಜೆಪಿ ಹೈಕಮಾಂಡ್ ನನಗೆ ಟಿಕೇಟ್ ನೀಡುವದು ಖಚಿತ ಎಂದು ಅಶೋಕ ನವಲಗುಂದ ಹೇಳಿದರು.

ಅವರು ಪಟ್ಟಣದ ಪ್ರತಿಕಾ ಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಾಮಾನ್ಯ ಜನರ ಹಾಗೂ ರೈತರ ಪರವಾಗಿ ಅನೇಕ ಹೋರಾಟಗಳನ್ನು ಕೈಗೊಂಡಿದ್ದನೆ ಅಲ್ಲದೇ ಹಲವಾರು ಚುಣಾವಣೆಯಲ್ಲಿ ಬಿಜೆಪಿ ಪಕ್ಷದ ನಾಯಕರ ಗೆಲುವಿಗೆ ನನ್ನ ಪಾತ್ರ ಬಹಳ ಮುಖ್ಯವಾಗಿತ್ತು. 1977-78ರಲ್ಲಿ ರೋಣ ತಾಲೂಕ ಜನತಾ ಪಾರ್ಟಿ ಯುವ ಘಟಕದ ಅಧ್ಯಕ್ಷನಾಗಿ ರೋಣ ಮತಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದೇನೆ. 1983ರಲ್ಲಿ ಜನತಾ ಪಕ್ಷದ ಏಕೈಕ ಅಭ್ಯರ್ಥಿಯಾಗಿದ್ದ ಜ್ಞಾನದೇವ ದೊಡ್ಡಮೇಟಿ ಅವರಿಗೆ ನಾನು ಟಿಕೇಟ್ ಬಿಟ್ಟು ಕೊಟ್ಟಿದ್ದೇನೆ. ಅಲ್ಲದೇ ಅವರ ಗೆಲುವಿಗೆ ನಾನು ಸಾಕಷ್ಟು ದುಡಿದಿದ್ದೆನೆ. ರಾಜ್ಯ ಯುವ ಜನತಾ ದಳ ಅಧ್ಯಕ್ಷ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆನೆ. 1994 ರಲ್ಲಿ ಶ್ರಿಶೈಲಪ್ಪ ಬಿದರೂರ ಗೆಲುವಿಗೆ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೆನೆ. ಅಲ್ಲದೇ ರೋನ ಮತ ಕ್ಷೇತ್ರದ ಬಿಜೆಪಿ ಶಾಸಕ, ಬಾಗಲಕೋಟ, ಹಾವೇರಿ ಮತಕ್ಷೇತ್ರದ ಸಂಸದರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೆನೆ. ಈ ಕ್ಷೇತ್ರದಲ್ಲಿರುವ ಭ್ರಷ್ಟಾಚರ ಅಧಿಕಾರಿಗಳ ವಿರೋಧ ಅನೇಕ ಹೋರಾಟ ಕೂಡ ಮಾಡಿದ್ದೆನೆ.
ನಾನು ಸುಮಾರು ದಶಕಗಳಿಂದ ಕಾಂಗ್ರೇಸ್ ವಿರೋಧಿಸುತ್ತ ಬಂದಿದ್ದು, ಪ್ರಾಮಾಣಿಕ, ಪಕ್ಷ ನಿಷ್ಟಾವಂತ ಕಾರ್ಯಕರ್ತನಾಗಿ ಶ್ರಮಿಸಿದ್ದೆನೆ. ಬಿಜೆಪಿಯ ಪ್ರಮುಖರು ಹಾಗೂ ಆರ್‍ಎಸ್‍ಎಸ್ ಪ್ರಮುಖರು ನನಗೆ ಟಿಕೇಟ್ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದು ಬಿಜೆಪಿ ಟಿಕೇಟ್ ಯಾರಿಗೂ ಸಿಕ್ಕರೂ ಪ್ರಾಮಾಣಿಕವಾಗಿ ಪ್ರಚಾರ ಮಾಡುವೆ. ಕಳಕಪ್ಪ ಬಂಡಿ ಹಾಗೂ ನಾನು ಮಾತ್ರ ಟಿಕೇಟ್ ಆಕಾಂಕ್ಷಿಗಳಾಗಿದ್ದು, ಬಹುತೇಕ ಏ.20ರ ಒಳಗಾಗಿ ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ. ನನಗೆ ಟಿಕೇಟ್ ಲಭಿಸಿದರೆ ಕಳಕಪ್ಪ ಬಂಡಿಯವರು ನನ್ನ ಪರವಾಗಿ ಪ್ರಚಾರ ಮಾಡಲಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ಬೀಡುವ ಅಥವಾ ಪಕ್ಷೇತರನಾಗಿ ಸ್ಪರ್ಧಿಸುವ ವಿಚಾರವಿಲ್ಲ ಎಂದರು.

loading...