ನನ್ನ ಗೆಲುವು ನಿಶ್ಚಿತ: ಎ.ಬಿ. ಪಾಟೀಲ

0
55
loading...

ಹುಕ್ಕೇರಿ 11: ಕ್ಷೇತ್ರದ ಜನರು ಬದಲಾವಣೆ ಬಯಸಿದ್ದು ನನ್ನ ಗೆಲವು ನಿಶ್ಚಿತ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.

ಪಟ್ಟಣದ ರಾಜನಕೊಡಿ ತೋಟದಲ್ಲಿರುವ ರೈತರಿಗೆ ಭೇಟಿಯಾಗಿ ಮಾತನಾಡಿದ ಎ.ಬಿ.ಪಾಟೀಲರು, ಜನರಿಗೆ ಇರುವ ಮೂಲಭೂತ ಸೌಕರ್ಯ ಕಲ್ಪಿಸದ ಹಾಲಿ ಶಾಸಕರು ಯಾವುದೇ ಅಭಿವೃದ್ದಿ ಕಾರ್ಯ ಮಾಡದೇ ಕೇವಲ ಸ್ವಾರ್ಥ ರಾಜಕರಣ ಮಾಡುತ್ತಿದ್ದು ಈ ಬಾರಿ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಜನರ ಸೇವೆ ಮಾಡುವ ಅವಕಾಶ ನೀಡ ಬೇಕೆಂದು ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಮುಖಂಡರಾದ ವಿಜಯ ರವದಿ,ಸಲಿಂ ಕಳಾವಂತ,ಅಶೋಕ ಅಂಕಲಗಿ,ಶ್ರೀಕಾಂತ ಭೂಶಿ, ಸಂತೋಷ ಚೌಗಲಾ, ಕಲ್ಲಪ್ಪಾ ವಾಸೇದಾರ, ಶಾಮ್ ಬಡಿಗೇರ, ಬಸವರಾಜ ಮಲಕಾಯಿ, ಬಸನಗೌಡ ಪಾಟೀಲ, ಅಜಪ್ಪಾ ತೋರಬಲ್ಲೆ ,ರಾಮ ತೋರವಲ್ಲೆ, ಮಹಾವೀರ ಮಲ್ಲಗೌಡನ್ನರ, ಗುರು ನಾಯಿಕ, ಗುರುನಾಥ ಬಡಿಗೇರ, ಗಣಪತಿ ಕಾಗಿನಕರ್, ಶಾಮ ಕಾಗಲೆ,ಮುಂತಾದವರು ಇದ್ದರು.

loading...