ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ: ಪಟ್ಟಣ

0
29
loading...

ಸುರೇಬಾನ: ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ ಹೊರತು, ಬೇರೆ ಯಾವುದೇ ಉದ್ದೇಶ ವಿಟ್ಟುಕೊಂಡು ಬಂದಿಲ್ಲವೆಂದು ಶಾಸಕ, ಕರ್ನಾಟಕ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು. ಅವರು ಸಮೀಪದ ಅವರಾದಿ ಗ್ರಾಮದಿಂದ ರಾಮದುರ್ಗದವರೆಗೆ ಮತ್ತೊಮ್ಮೆ ಜನಾಶೀರ್ವಾದ ಯಾಚಿಸಿ ಪಾದಯಾತ್ರೆ ನಡೆಸುವ ಸಂದÀರ್ಭದಲ್ಲಿ ಮನಿಹಾಳ ಗ್ರಾಮದ ಗುರುದೇವ ಆತ್ಮಾನಂದ ರಂಗಮಂದಿರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಬಿಸಿಲಿನಲ್ಲಿ ನಡೆದುಕೊಂಡು ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಂತಾಗುತ್ತದೆ. ನಾನು ತಮಗೆ ಮಳೆಗಾಲದಲ್ಲಿ ಅನುಕೂಲವಾಗಲೆಂದು ಸಿಸಿ ರಸ್ತೆ ಮಾಡಿಸಿದ್ದೇನೆ, ಮುಂದಿನ ದಿನಗಳಲ್ಲಿ ಹಿರೇಕೊಪ್ಪ ಗ್ರಾಮಕ್ಕೆ ಹೋಗುವ ಮಾರ್ಗದ ರಸ್ತೆಗೆ ಅಡ್ಡಲಾಗಿ ಎರಡು ಸೀಡಿಗಳ ಅವಶ್ಯಕತೆ ಇದೆ. ಅವುಗಳನ್ನು ಮುಂದಿನ ದಿನಗಳಲ್ಲಿ ಮಾಡಿಸಿಕೊಡುತ್ತೇನೆಂದು ಆಶ್ವಾಸನೆ ನೀಡಿದರು. ಪಾದಯಾತ್ರೆ ಸಂಧರ್ಭದಲ್ಲಿ ಬಿಸಿಲಿನ ತಾಪವನ್ನು ತಾಳಲಾರದೆ ಬಾಳೆ ಹಣ್ಣು, ತಂಪಾದ ಪಾನೀಯಗಳನ್ನು ರಸ್ತೆ ಉದ್ದಕ್ಕೂ ಪೂರೈಸಲಾಯಿತು. ಪಾದಯಾತ್ರಿಕರು ಉರಿಯುವ ಬಿಸಿಲಿಗೆ ರೋಷಿ ಹೋದ ಮಹಿಳೆಯರು ಮರಗಳ ನೆರಳಿನ ಮೊರೆ ಹೋಗಿ ತಂಗಿದ್ದು ಕಂಡು ಬಂತು. ಕೆಲ ಕಾರ್ಯಕರ್ತರು ವಾಹನದಲ್ಲಿ ಸಂಚರಿಸಿದರು. ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ವಾಹನಗಳ ಮೂಲಕ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

loading...