ನಾನೇ ಕಾಂಗ್ರೆಸ್ ಅಭ್ಯರ್ಥಿ: ಪ್ರದೀಪ ಮಾಳಗಿ

0
33
loading...

ರಾಯಬಾಗ: 2018ರ ರಾಯಬಾಗ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯಲಿದ್ದೇನೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಪ್ರದೀಪ ಮಾಳಗಿ ಹೇಳಿದರು.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಅವರು, ಯಾರು ಏನೇ ಹೇಳಿದರೂ ಅದಕ್ಕೆ ಮತದಾರರು ಗೊಂದಲಕ್ಕಿಡಾಗಬಾರದು ಪಕ್ಷದ ವರಿಷ್ಠರೇ ನನಗೆ ಟಿಕೆಟ್ ನೀಡಲಿದ್ದಾರೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಸಹಕಾರಿ ಧುರೀಣ ಪ್ರತಾಪರಾವ ಪಾಟೀಲ ಹಾಗೂ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಣಯ ಪಾಟೀಲ ಇವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಬಯಸಿರುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ನಂದಿಕುರಳಿ ಗ್ರಾಮ ಪಂಚಾಯತ ಅಧ್ಯಕ್ಷ ಸದಾಶಿವ ಉಪ್ಪಾರ, ಲಕ್ಷ್ಮಣ ಹಿರೇಕುರುಬರ, ಬೀರಪ್ಪ ಶಾಂಡಗೆ, ಬಸವರಾಜ ಕೋಟಿವಾಲೆ, ಮಲ್ಲಪ್ಪ ಗಡ್ಡೆ, ರಾಮಚಂದ್ರ ಉಪ್ಪಾರ, ಅರ್ಜುನ ಗಡಕರಿ ಉಪಸ್ಥಿತರಿದ್ದರು.

loading...