ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ : ಹಣಮಂತ ನಿರಾಣಿ

0
10
loading...

ಬೀಳಗಿ: ಪಟ್ಟಣದಲ್ಲಿ ಬಡ ಜನರಿಗೆ ವಸತಿ ವಾಜಪೇಯಿ ಆಶ್ರಯ ನಿವೇಶನದ ಹಕ್ಕು ಪತ್ರಗಳನ್ನು ಇನ್ನೂ ಕೆಲವರಿಗೆ ಮೂಲಪ್ರತಿಗಳನ್ನು ಕೊಡದೆ ದ್ವೇಶದ ರಾಜಕೀಯನ್ನು ಜೆ.ಟಿ.ಪಾಟೀಲ ಮಾಡುತ್ತಿದ್ದಾರೆ ಎಂದು ವಿದಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ ಆರೋಪಿಸಿದ್ದಾರೆ.
ಅವರು ಪಟ್ಟಣದ ವಾರ್ಡ ನಂಬರ 12,13 14 ಹಾಗೂ 15ನೇ ವಾಡೀನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಶೇ 60 ರಷ್ಟು ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ ಮುರಗೇಶ ನಿರಾಣಿ ಈ ಬಾರಿ ಆಯ್ಕೆಯಾಗುವದರಲ್ಲಿ ಯಾವದೆ ಸಂದೇಹವಿಲ್ಲ ಯಡಿಯೂರಪ್ಪ ಮುಖ್ಯಮಂತ್ರಿಯಾಗುವದು ಅಷ್ಟೆ ಸತ್ಯವಾಗಿದೆ ಚುನಾವಣೆ ಮುಗಿದ ನಂತರ ಪಟ್ಟಣದಲ್ಲಿ ಇನ್ನೂ 50 ಎಕರೆ ಜಮೀನಲ್ಲಿ ಆಶ್ರಯ ನಿವೇಶನಗಳನ್ನು ಮಾಡಿ ಗುಡಸಲು ಮುಕ್ತ ಮತಕ್ಷೇತ್ರ ಮಾಡುವ ಗುರಿಯನ್ನು ಮುರಗೇಶ ನಿರಾಣಿ ಹೊಂದಿದ್ದಾರೆ ಆದ ಕಾರಣ ಬಿಜೆಪಿಗೆ ಮತ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಸಂಗಪ್ಪ ಕಟಗೇರಿ, ಪಪಂ ಸದಸ್ಯೆ ಕವಿತಾ ಬಾಗೇವಾಡಿ ಮಲ್ಲಪ್ಪ ಶಂಬೋಜಿ, ಬಸವರಾಜ ಉಮಚಗಿಮಠ, ಶ್ರೀಶೈಲ ಯಂಕಂಚಿ, ಈರಣ್ಣ ತೋಟದ, ಹಣಮಂತ ಬೋರ್ಜಿ, ರಮೇಶ ಗಾಣಿಗೇರ, ಸಿದ್ದು ಉಕ್ಕಲಿ, ವಿಠ್ಠಲ ನಿಂಬಳಕರ, ಗಂಗಾಧರ ಕಲಬುರ್ಗಿ, ಬಸವಂತಪ್ಪ ಸಂಕಾನಟ್ಟಿ, ನಾಗರಾಜ ಗೊಳಸಂಗಿ, ಹಣಮಂತ ಮೆಳ್ಳಿಗೇರಿ, ನಾರಾಯಣ ಶೀಕಲವಾಡಿ, ಸುನಂದಾ ಪಾಟೀಲ, ಮಹಾದೇವಿ ಮೈಸೂರ, ಸಂತೋಷ ಬಗಲಿ, ಏಕನಾಥ ಶಿಕಲವಾಡಿ, ರಾಜು ಪರಸಗೊಂಡ, ಸಿದ್ದು ಬಗಲಿ, ಸಿದ್ಧನಗೌಡ ಪಾಟೀಲ, ಗುರಪಾದ ಬಗಲಿ, ಪರಸುರಾಮ ಬಾಗೇವಾಡಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

loading...