ನೀರುಬಳ್ಳಿಯಿಂದ ಕೃಷ್ಣೆ ನೀರು ಕಲುಷಿತ

0
24
loading...

ಕಾಗವಾಡ 15: ಕೃಷ್ಣಾ ನದಿಯಲ್ಲಿ ಸ್ವಲ್ಪ ಮಟ್ಟದಲ್ಲಿ ಮಹಾರಾಷ್ಟ್ರದಿಂದ ನೀರು ಹದಿದು ಬಂದಿದ್ದರು, ಆ ನೀರಿನೊಂದಿಗೆ ಪಂಚಗಂಗಾ ನದಿಯಲ್ಲಿರುವ “ನೀರಬಳ್ಳಿ” ಹರೆದು ಬಂದಿದ್ದು, ಸಂಪೂರ್ಣವಾಗಿ ನದಿ ನೀರು ನೀರಬಳ್ಳಿಯಿಂದ ವ್ಯಾಪಿಸಿದೆ. ಇದರಿಂದ ಕೃಷ್ಣಾ ನದಿ ತಿರದ ಜುಗೂಳ, ಮಂಗಾವತಿ, ಶಹಾಪುರ ಸೇರಿದಂತೆ ಅನೇಕ ಗ್ರಾಮದ ರೈತರು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ನದಿ ಕರ್ನಾಟಕ ರಾಜ್ಯದಲ್ಲಿ ಹರಿದು ಬರುವ ಮೊದಲನೆಯ ಸ್ಥಾನ ರಾಜಾಪುರ ಬ್ಯಾರೇಜ ನಂತರ ಮಂಗಾವತಿ ಜುಗೂಳ, ಶಹಾಪುರ, ಇಂಗಳಿ, ಮೋಳವಾಡ, ಕುಸನಾಳ ಈ ಗ್ರಾಮಗಳ ಎರಡು ಗ್ರಾಮಗಳ ಗ್ರಾಮಸ್ಥರು ನದಿ ನೀರು ಸೇವಿಸುತ್ತಾರೆ.
ನದಿ ನೀರಿನಲ್ಲಿ ನೀರಬಳ್ಳಿ ಹರಿದು ಬಂದಿದ್ದರಿಂದ ನೀರು ಕಾಣಿಸುವದಲ್ಲ. ಎಲ್ಲೆಡೆ ಹಚ್ಚ ಹಸಿರು ಕಾಣಿಸುತ್ತಿದೆ. ನೀರಬಳ್ಳಿಗೆ ಸುಮಾರು 6 ಇಂಚು ಬೇರುಗಳಿದ್ದು, ಈ ಬಳ್ಳಿ ಒಂದರಲ್ಲಿ, ಒಂದು ಸಿಲುಕಿದೆ. ಅದನ್ನು ಬೇರ್ಪಡಿಸಿದರೆ ಮಾತ್ರ ನೀರು ತೆಗೆದುಕೊಳ್ಳಬಹುದು.

ಕೃಷ್ಣಾ ನದಿಯ ಜುಗೂಳ-ಖಿದ್ರಾಪುರ ಮಧ್ಯ ಡೋನಿ ಮುಖಾಂತರ ಪ್ರಯಾಣ ಬಳಿಸುತ್ತಾರೆ. ನೀರಬಳ್ಳಿ ನೀರಿನಲ್ಲಿ ಹಬ್ಬಿದ್ದರಿಂದ ಡೋಣಿ ಚಲಿಸಲು ತೊಂದರೆಯಾಗುತ್ತಿದೆ ಎಂದು ಕಲ್ಲಪ್ಪಾ ಅಂಬಿಗ್ ಹೇಳಿದನು. ಎಪ್ರಿಲ್ ತಿಂಗಳಿನ ಬೇಸಿಗೆಯಲ್ಲಿ ಅನೇಕ ಬಾಲಕರು, ಯುವಕರು ನದಿಯಲ್ಲಿ ಈಜಲು ಹೋದಾಗ ಈ ನೀರಬಳ್ಳಿ ತೊಂದರೆಯಾಗುತ್ತಿದ್ದರಿಂದ, ಇದನ್ನು ತೆಗೆದುಹಾಕುವ ಬೇಡಿಕೆ ಇಲ್ಲಿಯ ಯುವಕರದ್ದಾಗಿದೆ.
ನೀರು ಕಲುಷಿತಗೊಳ್ಳುತ್ತಿದೆ. ಈ ನೀರು ಸೇವಿಸಿದವರರಿಗೆ ಬೇಧಿ ಕಾಯಿಲೆ ಪ್ರಾರಂಭವಾಗಿದೆ ಎಂದು ಜುಗೂಳ ಗ್ರಾಮದ ಗ್ರಾಮಸ್ಥರು ಹೇಳುತಿದ್ದಾರೆ. ನದಿಯಲ್ಲಿ ಹರಿದು ಬಂದ ನೀರಬಳ್ಳಿ ತೆಗೆದುಹಾಕಬೇಕೆಂದು ನದಿ ತೀರದ ಗ್ರಾಮಸ್ಥರ ಬೇಡಿಕೆಯಾಗಿದೆ.

loading...