ನೂನ್ಯತೆಗಳೇ ಬದುಕಿನ ಸವಾಲುಗಳು: ರಂಗರಾಜ ವನದುರ್ಗ

0
23
loading...

ಶೇಡಬಾಳ 15: ಭೂಮಿ ಮೇಲಿರುವ ಎಲ್ಲ ಶಿಲೆಗಳು ಶಿಲ್ಪವಾಗಲಾರವು, ಎಲ್ಲ ಮಳೆ ಹನಿಗಳು ಮುತ್ತುಗಳಾಗುವದಿಲ್ಲ. ಶಿಲ್ಪಿಯ ಕೈಯಲ್ಲಿ ಸಿಗುವ ಶಿಲೆಗಳು ಶಿಲ್ಪಗಳಾದರೆ, ಸಮುದ್ರದಲ್ಲಿ ಬೀಳುವ ಮಳೆ ಹನಿಗಳು ಮುತ್ತುಗಳಾಗುತ್ತವೆ. ಅದರಂತೆಯೇ, ಶಿವಾನಂದ ಕಾಲೇಜಿನ ಶಿಕ್ಷಕರ ಕೈಗೆ ದೊರೆಯುವ ವಿದ್ಯಾರ್ಥಿಗಳು ಉತ್ಕ್ರಷ್ಟ ವ್ಯಕ್ತಿಗಳಾಗುತ್ತಾರೆ ಎಂದು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಂಗರಾಜ ವನದುರ್ಗ ಹೇಳಿದರು.

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಜರುಗಿದ ವಾರ್ಷಿಕೋತ್ಸವ ಹಾಗೂ ಕ್ರೀಡಾಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಅವರು ಮುಂದುವರೆದು, ವಿದ್ಯಾರ್ಥಿಗಳು ತಮ್ಮಲ್ಲಿಯ ಕೊರತೆಗಳನ್ನೇ ಸವಾಲೆಂದು ಸ್ವೀಕರಿಸಿ ಅದನ್ನು ಮೆಟ್ಟಿ ನಿಂತು ಜಯಿಸಬೇಕು. ಪಾಲಕರಿಗೆ, ಸಮಾಜಕ್ಕೆ, ಸಂಸ್ಥೆಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕೆಂದು ಮತ್ತು ಅದೇ ಶಿಕ್ಷ್ಪ್ಷಕರಿಗೆ ತೃಪ್ತಿ ತರುವದೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿಯವರು ಮಾತನಾಡಿ ಮಹಾವಿದ್ಯಾಲಯ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕøತಿಯನ್ನು ಮತ್ತು ಮೌಲ್ಯಗಳನ್ನು ವೃದ್ಧಿಸುವಲ್ಲಿ ಶ್ರಮಿಸುತ್ತಿದೆ. ಉತ್ಕøಷ್ಟ ಗುಣಮಟ್ಟದ ಸಿಬ್ಬಂದಿಯ ಸಹಕಾರ ಪ್ರಶಂಸನೀಯವೆಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಏಕನ್ಯಾಸಧಾರಿಗಳಾದ ಪೂಜ್ಯ ಶ್ರೀ.ಯತೀಶ್ವರಾನಂದ ಸ್ವಾಮೀಜಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಎಲ್ಲ ಸೌಕರ್ಯ ಮತ್ತು ಸವಲತ್ತುಗಳನ್ನು ಒದಗಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಗೊಳ್ಳುವಂತೆ ಕಾಂiÀರ್i ನಿರಂತರ ನಡೆಯುತ್ತಿದೆಯೆಂದು ಹೇಳಿದರು.

ಲಮಹಾವಿದ್ಯಾಲಯದ ಸಿಬ್ಬಂದಿಯವರಲ್ಲಿ ಹಿರಿಯ ಪ್ರೊ.ಎಸ್.ಎಸ್.ಬಾಗನೆ, ಪ್ರೊ. ಟಿ.ಆರ್.ದರೇಕರ, ಪ್ರೊ.ಬಿ.ಎ.ಪಾಟೀಲ, ಡಾ.ಎಸ್.ಪಿ.ತಳವಾರ, ಪಿ.ಎಂ.ದೊಡಮನಿ, ಪ್ರೊ.ಜೆ.ಕೆ.ಪಾಟೀಲ, ಡಾ.ಆರ್.ಎಸ್.ಕಲ್ಲೋಳಿಕರ ಅಶ್ವಿನಿ ಸೌಂದತ್ತಿ, ಸುರೇಶ ಪಾಟೀಲ, ಐ.ಎಸ್.ಜಮಾದಾರ, ಕೆ.ಜೆ.ದೇಸಾಯಿ, ಆರ್.ಎ.ನಂದರಗಿ, ಎಂ.ಎಂ.ಕಟ್ಟಿಮನಿ, ಬಿ.ಎಸ್.ಕಾಮತ, ಎಸ್.ಎ.ಇನಾಮದಾರ, ಬಿ.ಜೆ.ಸೌದತ್ತಿ, ಕೆ.ಎಸ್.ಮೊಳೆಕರ, ಪಿ.ಟಿ.ಕಾಂಬಳೆ ಮತ್ತು ಸಮಸ್ತ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

loading...