ಪಕ್ಷದ ವರಿಷ್ಠರ ತೀರ್ಮಾಣಕ್ಕೆ ಬದ್ಧ: ಸುಬ್ರಾಯ ವಾಳ್ಕೆ

0
8
loading...

ಕನ್ನಡಮ್ಮ ಸುದ್ದಿ-ಕುಮಟಾ: ಬಿಜೆಪಿ ಪಕ್ಷದ ವರಿಷ್ಠರ ಆಶಯದಂತೆ ದಿನಕರ ಶೆಟ್ಟಿಯವರಿಗೆ ಪಕ್ಷದಿಂದ ಟಿಕೆಟ್ ದೊರೆತಿದ್ದು, ನಮ್ಮೆಲ್ಲ ನಾಯಕರ ನಿರ್ಣಯವನ್ನು ನಾನು ಗೌರವಿಸುವ ಜೊತೆಗೆ ಪಕ್ಷದ ಧ್ಯೇಯೋದ್ದೇಶಗಳನ್ನು ಪಾಲಿಸುತ್ತಾ ಈ ಬಾರಿಯ ನಮ್ಮ ಪಕ್ಷದ ಅಭ್ಯರ್ಥಿ ದಿನಕರ ಶೆಟ್ಟಿ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತಾ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಬಿ ಜೆ ಪಿ ಅಭ್ಯರ್ಥಿಯನ್ನೇ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ ಎಂದು ಬಿಜೆಪಿ ಮುಖಂಡ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ತಿಳಿಸಿದ್ದಾರೆ.
ಕುಮಟಾ-ಹೊನ್ನಾವರ ಕ್ಷೇತ್ರದ ಚಿತ್ರಣವನ್ನು ಬದಲಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ದಿಶೆಯಲ್ಲಿ ಹೊಸ ಕಲ್ಪನೆ ಹೊತ್ತು ಕ್ಷೇತ್ರದುದ್ದಕ್ಕೂ ಸಂಚರಿಸಿ ಕಲೆ, ಕ್ರೀಡೆ, ಶಿಕ್ಷಣ ಹಾಗೂ ಧಾರ್ಮಿಕತೆಗೆ ಒತ್ತುಕೊಟ್ಟು ಎಲ್ಲಾ ಸನಾಜದವರ ಪ್ರೀತಿಗಳಿಸಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಪಕ್ಷದ ಮುಖಂಡರ ಜೊತೆಯಲ್ಲಿಯೂ ಉತ್ತಮ ನಂಟು ಹೊಂದಿದ್ದ ಟಿಕೆಟ್ ಆಕಾಂಕ್ಷಿ ಸುಬ್ರಾಯ ವಾಳ್ಕೆ ಅವರು ಟಿಕೆಟ್‍ಗಾಗಿ ತೀವ್ರ ಪೈಪೊಟಿ ನಡೆಸಿದ್ದರು. ಆದರೆ, ಕೊನೆಗಳಿಗೆಯಲ್ಲಿ ಪಕ್ಷದ ವರಿಷ್ಠರು ಅಂತಿಮವಾಗಿ ದಿನಕರ ಶೆಟ್ಟಿ ಅವರಿಗೆ ಟಿಕೆಟ್ ನೀಡಿದೆ. ನಾನು ಕೂಡಾ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿ ಜೆ ಪಿ ಪಕ್ಷದ ಒಬ್ಬ ಟಿಕೆಟ್ ಆಕಾಂಕ್ಷಿಯಾಗಿ ಜನರಿಗೆ ಇನ್ನೂ ಹೆಚ್ಚಿನ ಅನೂಕೂಲತೆಗಳನ್ನು ಒದಗಿಸುವ ಆಕಾಂಕ್ಷಿಯನ್ನು ಹೊಂದಿದ್ದೆ. ಆದರೆ ಇದೀಗ ಪಕ್ಷದ ವರಿಷ್ಠರ ಆಶಯದಂತೆ ದಿನಕರ ಶೆಟ್ಟಿಯವರಿಗೆ ಪಕ್ಷದಿಂದ ಟಿಕೆಟ್ ದೊರೆತಿದ್ದು, ನಮ್ಮೆಲ್ಲ ನಾಯಕರ ನಿರ್ಣಯವನ್ನು ನಾನು ಗೌರವಿಸುತ್ತೇನೆ. ಅಲ್ಲದೇ ಪಕ್ಷದ ನಿರ್ಧಾರವನ್ನು ಗೌರವದಿಂದ ಒಪ್ಪಿ ಸ್ವೀಕರಿಸಿದ ಸುಬ್ರಾಯ ವಾಳ್ಕೆ ಅವರು ಪಕ್ಷದ ತೀರ್ಮಾಣಕ್ಕೆ ಬದ್ಧರಾಗಿ ಅಭ್ಯರ್ಥಿ ಗೆಳುವಿಗೆ ಶ್ರಮಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...