ಪಕ್ಷೇತರನಾಗಿ ಸ್ಪರ್ಧಿಸುವೆ: ಚಂದ್ರಶೇಖರ

0
23
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಾನೆಂದು ಕೈ ಚಾಚಿ ಬದುಕಿದವನಲ್ಲ. ಇನ್ನೊಬ್ಬರ ಕಷ್ಟಸುಖಗಳಲ್ಲಿ ಭಾಗಿಯಾಗಿ ಬದುಕು ಕಟ್ಟಿಕೊಂಡು ಬಂದಿದ್ದೇನೆ. ಲೋಕದ ಜನರಿಗೆ ಒಳ್ಳೆಯದಾಗಬೇಕೆಂಬ ಬಯಕೆಯನ್ನು ಹೊತ್ತವ ನಾನು ಮತ್ತು ಅದರಂತೆ ನಡೆದುಕೊಂಡಿದ್ದೇನೆ ಎಂಬ ಧನ್ಯತೆ ನನಗಿದೆ. ಈ ಭಾಗದಲ್ಲಿ ಜೆಡಿಎಸ್‌ ಪಕ್ಷಕ್ಕೆ ದಿಕ್ಕು ದೆಸೆಯಿಲ್ಲದೆ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾಗ ಪಕ್ಷದ ಅಧ್ಯಕ್ಷನಾಗಿ ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಶ್ರಮಿಸಿದ್ದೇನು.
ಕಳೆದ 44 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಸೇವಾ ಕಾರ್ಯ ಮಾಡಿಕೊಂಡು ಬಂದಿರುವ ನಾನು ಕಳೆದ 10 ವರ್ಷಗಳಿಂದ ಜೆ.ಡಿ.ಎಸ್‌. ಅಧ್ಯಕ್ಷನಾಗಿ ಸ್ಥಳೀಯವಾಗಿ ಹಲವು ಗೆಲುವುಗಳಿಗೆ ಕಾರಣನಾದವನಾಗಿದ್ದೇನೆ. ಜೆ.ಡಿ.ಎಸ್‌. ರಾಜ್ಯಾದ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಯವರೇ ನನ್ನನ್ನು ಕರೆದು ನನಗೇ ಟಿಕೆಟ್‌ ನೀಡುವುದಾಗಿ ಹೇಳಿ ಈಗ ನಂಬಿಕೆ ದ್ರೋಹ ಮಾಡಿದ್ದಾರೆ.
ಹಳಿಯಾಳದ ಜಿ.ಪಂ ಮಾಜಿ ಸದಸ್ಯ ಖೈತಾನ ಬಾರಬೋಜಾ ಮಾತನಾಡಿ ನಾವು ಜೆ.ಡಿ.ಎಸ್‌. ಹಾಗೂ ಕುಮಾರಸ್ವಾಮಿಯವರ ಅಭಿಮಾನಿಗಳು. ಕುಯಮಾರಸ್ವಾಮಿ ಚಂದ್ರಶೇಖರವರನ್ನೇ ಅಭ್ಯರ್ಥಿಯನ್ನಾಗಿಸುವ ಭರವಸೆಯನ್ನು ನಮಗೆ ನೀಡಿದ್ದರು. ಆದರೆ ಕೊನೆಯಲ್ಲಿ ಕ್ಷೇತ್ರದವರಲ್ಲದ ಬೇರೆಯವರಿಗೆ ಟಿಕೆಟ್‌ ನೀಡಿ ಬೇಸರ ಮಾಡಿದ್ದಾರೆ. ಯಾವ ಕಾರಣಕ್ಕೂ ನಾವು ಆ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ. ಚಂದ್ರಶೇಖರವರನ್ನು ನಾವು ಜೆ,ಡಿ.ಎಸ್‌. ಬಂಡಾಯ ಅಭ್ಯರ್ಥಿಯನ್ನಾಗಿ ಕಣದಲ್ಲಿರಿಸಿ ಚುನಾವಣೆ ಎದುರಿಸುತ್ತೇವೆ.
ಸುದ್ದಿಗೋಷ್ಠಿಲ್ಲಿ ದಾಂಡೇಲಿ ನಗರಸಭೆ ಮಾಜಿ ಅಧ್ಯಕ್ಷ ಕೆ.ಎಸ್‌. ಪಾಟೀಲ, ಹಿರಿಯ ಮುಖಂಡರಾದ ಎಸ್‌.ಜಿ. ಬಿರಾದರ, ಪ್ರಭಾಕರ ಶೆಟ್ಟಿ, ಸಿ.ಎಸ್‌. ವಸ್ತ್ರದ, ನಗರಸಭಾ ಸದಸ್ಯೆ ಸುಶೀಲಾ ಕಾಸರಕೋಡ, ನಗರಸಭೆ ಮಾಜಿ ಸದಸ್ಯ ಉದಯ ನಾಯರ್‌, ಪ್ರಮುಖರಾದ ಸುಧಾಕರ ಶೆಟ್ಟಿ, ಬಸಪ್ಪಾ ಶಾಬಾದಿ, ನಿಂಗನಗೌಡ ಪಾಟೀಲ, ರುಕ್ಮಿಣಿ ಬಾಗಡೆ, ಮಾರುತಿ ಬೋಜೆ, ಹಳಿಯಾಳ, ರವಿ ವಾಟ್ಲೇಕರ, ಲಕ್ಷ್ಮಿಬಾಯಿ ನಾಯ್ಕ, ಜಗಲಪೇಟೆಯ ಮೀನಾಕ್ಷಿ ಬಾಂಬೋಲಕ, ಪ್ರಮೀಳಾ ನಾರ್ವೇಕರ, ಜನಗಾದ ಸುಭಾಶ ಗೌಡಾ, ನಾಗಶೆಟ್ಟಿಕೊಪ್ಪಾದ ಕೇದಾರ ಚೌವ್ಹಾಣ್‌ ಸೇರಿದಂತೆ ನೂರಾರು ಮುಖಮಡರು ಉಪಸ್ಥಿತರಿದ್ದರು.

loading...