ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಬೇವಿನಕಟ್ಟಿ

0
33
loading...

ಮುಂಡರಗಿ: ರೋಣ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದ ಜನರು ಆಶೀರ್ವದಿಸಿದರೆ ರೋಣ ಮತಕ್ಷೇತ್ರವನ್ನು ರಾಜ್ಯದಲ್ಲೆ ಉತ್ತಮ ಅಭಿವೃದ್ಧಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ನರೇಗಲ್‍ನ ಹಠಯೋಗಿ ಕ್ರೀಡಾ ಹಾಗೂ ಸಾಂಸ್ಕøತಿಕ ಸೇವಾ ಸಂಸ್ಥೆ ಅಧ್ಯಕ್ಷ ಅಶೋಕ ಬೇವಿನಕಟ್ಟಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್‍ಆರ್ ಪಕ್ಷದಿಂದ ರೋಣ ಮತಕ್ಷೇತ್ರಕ್ಕೆ ಸ್ಪರ್ಧಿಸಿದ್ದೆ. ಆಗ ನನಗೆ 2ಸಾವಿರ ಮತದಾರರು ಮತವನ್ನು ಹಾಕಿದ್ದರು.
ಕ್ಷೇತ್ರದಲ್ಲಿ ಯಾವುದೆ ಇಲಾಖೆಗೆ ಹೋದರೆ ಲಂಚ ನೀಡದೆ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ದುಸ್ಥಿತಿಯನ್ನು ಈಗಿನ ಜನಪ್ರತಿನಿಧಿಗಳು ತಂದಿಟ್ಟಿದ್ದಾರೆ ಎಂದು ಆರೋಪಿಸಿದರು. ಮುಂಡರಗಿ ತಾಲೂಕಿನಲ್ಲಿರುವ ಸಸ್ಯಕಾಶಿ ಕಪ್ಪತಗುಡ್ಡ ಅಭಿವೃದ್ಧಿಗೆ ಶ್ರಮಿಸಿಲ್ಲ, ಎಲ್ಲ ಜನಪ್ರತಿನಿಧಿಗಳು ಕ್ಷೇತ್ರದ ಮುಗ್ಧ ಜನರಿಗೆ ಮಣ್ಣೇರಚುವ ಕೆಲಸ ಮಾಡಿದ್ದಾರೆ. ಹಮ್ಮಿಗಿ ಬ್ಯಾರೇಜ್‍ನಿಂದ ಡಂಬಳ ಹೋಬಳಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಜನರು ಈಗ ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಗದಗ-ವಾಡಿ ರೈಲ್ವೆ ನಿರ್ಮಾಣ ವಿಚಾರದಲ್ಲಿ ನರೇಗಲ್ಲ, ಗಜೇಂದ್ರಗಡ, ಭಾಗದಲ್ಲಿ ಹಲವಾರು ಬಾರಿ ಹೋರಾಟ ಮಾಡಿದ್ದೇನೆ. ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ಹಲವು ವರ್ಷಗಳಿಂದ ತೋಡಗಿಕೊಂಡಿದ್ದೇನೆ. ರೋಣ ಮತಕ್ಷೇತ್ರದ ಸರ್ವ ಮತದಾರರು ಚುನಾವಣೆಯಲ್ಲಿ ನನಗೆ ಆಶೀರ್ವದಿಸಬೇಕು ಎಂದರು.

loading...