ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಆಗ್ರಹ

0
39
loading...

ಶಿರಸಿ: ವಿಧಾನಸಭೆ ಚುನಾವಣೆಗೆ ಬಿಜೆಪಿ ಎರಡನೇ ಹಂತದ ಪಟ್ಟಿ ಹೊರ ಬೀಳುತ್ತಿದ್ದಂತೆ ಉತ್ತರ ಕನ್ನಡದ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತದ ಹೊಗೆಯಾಗಡತೊಡಗಿದೆ. ಟಿಕೇಟ್ ಆಸೆಯಿಂದಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಲ್.ಟಿ.ಪಾಟೀಲ ಮೂಲ ಬಿಜೆಪಿಗರಾದ ಹಾಲೀ ಅಭ್ಯರ್ಥಿ ವಿ.ಎಸ್.ಪಾಟೀಲ ವಿರುದ್ಧ ಧ್ವನಿ ಎತ್ತಿದ್ದಾರೆ.
ಉತ್ತರ ಕನ್ನಡದ ಜಿದ್ದಾಜಿದ್ದಿನ ಕಣವಾಗಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಬಂಡಾಯದ ಬಿಸಿ ಎದುರಿಸುತ್ತಿದೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ಲಿಂಗಾಯಿತ ಸಮುದಾಯದ ಪ್ರಭಲ ನಾಯಕ ಹಾಗೂ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ ಹೆಸರು ಘೋಷಣೆಯಾಗಿದ್ದೇ ಇದಕ್ಕೆ ಕಾರಣವಾಗಿದೆ. ವರ್ಷದ ಹಿಂದೆ ಜಿಲ್ಲಾ ಸಚಿವ ಆರ್.ವಿ.ದೇಶಪಾಂಡೆ ಪಾಳಯ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಮರಾಠ ಸಮುದಾಯದ ಎಲ್.ಟಿ.ಪಾಟೀಲ ಕ್ಷೇತ್ರದಲ್ಲಿ ಪ್ರಭಲ ಟಿಕೇಟ್ ಆಕಾಂಕ್ಷಿಯಾಗಿದ್ದರು. ಪಕ್ಷದ ಪ್ರಮುಖರು ಕೂಡ ಟಿಕೇಟ್ ನೀಡುವದಾಗಿ ಭರವಸೆ ನೀಡುತ್ತ ಬಂದಿದ್ದರು. ಕೊನೆ ಘಳಿಗೆಲ್ಲಿ ಟಿಕೇಟ್ ಕೈತಪ್ಪಿದ ಪರಿಣಾಮ ಬಂಡಾಯದ ಸಿದ್ಧತೆಯಲ್ಲಿ ಎಲ್.ಟಿ.ಪಾಟೀಲ್ ಮುನ್ನಡೆದಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಆದರೆ ವಿ.ಎಸ್.ಪಾಟೀಲ ಹಣ ನೀಡಿ ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾದಂತಿದೆ ಎಂದು ಟಿಕೇಟ್ ವಂಚಿತ ಎಲ.ಟಿ.ಪಾಟೀಲ ಆರೋಪಿಸಿದರು.

ಇನ್ನು ಟಿಕೇಟ್ ಕೈತಪ್ಪಿದ ಬೆನ್ನಿಗೇ ಬಿಜೆಪಿ ಆಕಾಂಕ್ಷಿ ಎಲ್.ಟಿ.ಪಾಟೀಲ್ ಹಾಗೂ ಅವರ ಕಾರ್ಯಕರ್ತರು ಶಿರಸಿಯಲ್ಲಿ ಪ್ರತಿಭಟನೆ ಮಾಡಿದರು. ಎಲ್.ಟಿ.ಪಾಟೀಲ್ ಗೆ ಟಿಕೆಟ್ ಕೈತಪಿದ್ದಾಕ್ಕಾಗಿ ಕಾರ್ಯಕರ್ತರ ಆಕ್ರೋಷ ವ್ಯಕ್ತಪಡಿಸಿದರು. ಅನಂತಕುಮಾರ ಹೆಗಡೆ ಸಲಹೆಯ ಮೇರೆಗೆ ಆಕಾಂಕ್ಷಿ ಬೆಂಬಲಿಗರು ಮುಂದಿನ ನಡೆಗೆ ಸಜ್ಜಾಗಿದ್ದಾರೆ. ಕೂಡಲೇ ಅಭ್ಯರ್ಥಿಯ ಬದಲಾವಣೆಯಾಗಬೇಕು ಎಂದು ಪಟ್ಟುಹಿಡಿದ ಕಾರ್ಯಕರ್ತರು, ಇಲ್ಲವಾದಲ್ಲಿ ಮುಂದಿನ ನಡೆಯನ್ನ ಕಾರ್ಯಕರ್ತರ ಸಭೆ ನಡೆಸಿ ಮುಂದುವರೆಯಲಾಗೋದು ಅಂದ್ರು. ಅಲ್ಲದೆ ಕಳೆದ ಭಾರಿ ವಿಧಾನಸಭೆ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಸೋತ ವಿ.ಎಸ್ ಪಾಟೀಲರಿಗೆ ಟಿಕೆಟ್ ನೀಡಿದೆ. ಬಿಜೆಪಿ ಪಕ್ಷದ ಸಂಘಟಿತ ಮುಖಂಡರಾದ ಎಲ್.ಟಿ ಪಾಟೀಲ್ ಅವರಿಗೆ ದ್ರೋಹ ಮಾಡಿದೆ. ಈ ಬಗ್ಗೆ ಹೈಕಮಾಂಡ್ ಸೂಕ್ತ ಕ್ರಮ ಕೈಗೊಂಡು ಎಲ್.ಟಿ.ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಮುಂಡಗೋಡ ತಾಲೂಕು ಬಿಜೆಪಿ ಅಧ್ಯಕ್ಷ ಗುಡ್ಡಪ್ಪ ಕಾತೂರು ಹಾಗೂ ಯಲ್ಲಾಪುರ ತಾಲೂಕು ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಆಗ್ರಹಿಸಿದರು.

loading...