ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಟ್ರಾಫಿಕ್ ಸಮಸ್ಯೆಯಿಂದ ಜನರ ಪರದಾಟ

0
21
loading...

ಸಿದ್ದು ಹೂಗಾರ
ಲೋಕಾಪೂರ: ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ಈ ಗ್ರಾಮಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಜಾಲಿಕಟ್ಟಿ, ವೆಂಕಟಾಪೂರ, ನಾಗಣಾಪೂರ, ಅರಳಿಕಟ್ಟಿ, ಲಕ್ಷಾನಟ್ಟಿ, ದಾದನಟ್ಟಿ, ಠಾಣಿಕೇರಿ, ಚೌಡಾಪೂರ ಹೀಗೆ ವಿವಿಧ ಗ್ರಾಮಗಳಿಂದ ನಿತ್ಯ ಸಾವಿರಾರು ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಪಟ್ಟಣಕ್ಕೆ ಆಗಮಿಸುತ್ತಾರೆ. ಏಕೆಂದರೆ ಪ್ರತಿ ಮಂಗಳವಾರಕ್ಕೊಮ್ಮೆ ಸಂತೆಯು ದೊಡ್ಡ ಪ್ರಮಾಣದಲ್ಲಿ ನಡೆಯುವದರಿಂದ ಸುತ್ತಮುತ್ತಲಿನ ಗ್ರಾಮದ ಜನರು ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಬರುತ್ತಾರೆ. ಹೀಗಾಗಿ ಲೋಕಾಪೂರ ಬಸವೇಶ್ವರ ವೃತ್ತವು ದ್ವಿಚಕ್ರ ವಾಹನಗಳಿಂದ ತುಂಬಿರುತ್ತದೆ. ಇದರಿಂದ ಸರ್ಕಾರಿ ಬಸ್, ಲಾರಿಗಳು, ಟಂಟಂಗಳು, ಟ್ಯಾಂಕರ್, ಹೀಗೆ ಅನೇಕ ವಾಹನಗಳಿಗೆ ಅಡತಡೆಯಾಗಿವೆ. ಇದರಿಂದ ಪಾದಚಾರಿಗಳಗೆ ಅಲೆದಾಡಲು ಮಾರ್ಗಗಳೇ ಇಲ್ಲದಂತಾಗಿದೆ. ಆದ್ದರಿಂದ ಬಸ್ ನಿಲ್ದಾಣದ ಹಿಂದೆ ಇರುವ ಖಾಳಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಎನ್ನುವುದು ಗ್ರಾಮದ ಹಿರಿಯರ, ನಾಗರಿಕರ ಆಶಯವಾಗಿದೆ.

ಮಧ್ಯಾಹ್ನದ ಬಿಸಿಲಿನ ಬೇಗೆಯಲ್ಲಿ ಲೋಕಾಪೂರ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿದೆ. ವೃತ್ತದಲ್ಲಿ ನಿಲ್ಲಿಸುವ ದ್ವಿಚಕ್ರ ವಾಹನಗಳ ಹಾವಳಿಯಿಂದ ಸಾರ್ವಜನಿಕರಿಗೆ ನಡೆದಾಡಲು ಮಾರ್ಗಗಳೇ ಇಲ್ಲದಂತಾಗಿದೆ. ಏಕೆಂದರೆ ಎಲ್ಲ ಪುಟಪಾತಗಳು ದ್ವಿಚಕ್ರವಾಹನಗಳ ಪಾರ್ಕಿಂಗ್ ಸ್ಥಳಗಳಾಗಿವೆ. ಅನಿವಾರ್ಯವಾಗಿ ರಸ್ತೆ ಮೇಲೆ ಅಲೆದಾಡುವಂತಾಗಿದೆ. ಇದರಿಂದ ರಸ್ತೆ ಅಪಘಾತಗಳೂ ಸಂಭವಿಸುತ್ತಿವೆ.
ಹಂದಿ-ನಾಯಿಗಳ ತಾಣ: ಬಸ್ ನಿಲ್ದಾಣ ಹಿಂದಿರುವ ಖಾಲಿ ಜಾಗದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡದಿದ್ದರೆ, ಆ ಜಾಗವು ಹಂದಿ ನಾಯಿಗಳ ತಾಣವಾಗುವುದಷ್ಟೇ ಅಲ್ಲದೆ ಇನ್ನಿತರ ಅನಾವಶ್ಯಕ , ಅಹಿತಕರ ಚಟುವಟಿಕೆಗಳಿಗೆ ಸೀಮಿತವಾಗುತ್ತದೆ. ಮತ್ತು ಕಸ-ಕಡ್ಡಿ ಎಸೆಯುದರಿಂದ ಗಲಿಜು ತುಂಬಿಕೊಂಡು ಗೊಬ್ಬೆದ್ದು ನಾರಲು ಪ್ರಾರಂಭಿಸುತ್ತದೆ. ಇದರಿಂದ ನಾನಾ ರೀತಿಯ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಎಂಬುದು ಸಾರ್ವಜನಿಕರ ನಿಲುವುವಾಗಿದೆ.

ಪೊಲೀಸರ ಗೋಳು, ಕೇಳುವರ್ಯಾರು? ಲೋಕಾಪೂರ ಬಸ್ ಸಂಚಾರದ ಮುಖ್ಯ ಕೇಂದ್ರ ಬಿಂದುವಾಗಿದೆ. ಬೆಳಗಾವಿ, ರಾಯಚೂರ, ವಿಜಯಪೂರ, ಧಾರವಾಡ, ಮಾರ್ಗವಾಗಿ ಹೋಗುವ ವಾಹನಗಳಿಗೆ ಮೂಲ ಕೇಂದ್ರವಾಗಿದ್ದರಿಂದ ಟ್ರಾಫೀಕ್ ಜಾಮ್, ನಿರ್ಮಾಣವಾಗಿ ಪೊಲೀಸರು ಗೋಳಾಡುವಂತಾಗಿದೆ. ರಾಜ್ಯದ ಯಾವುದೇ ಒಬ್ಬ ಸಚಿವರು ಈ ಮಾರ್ಗವಾಗಿ ಹೋಗುವಾಗ ಟ್ರಾಫಿಕ್ ನಿವಾರಣೆ ಮಾಡುವಲ್ಲಿ ಬಹಳಷ್ಟು ತೊಂದರೆಗೊಳಗಾಗುತ್ತಾರೆ. ಬಸ್ ನಿಲ್ದಾಣ ಹಿಂದಿನ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಸ್ವಲ್ಪಮಟ್ಟಿಗೆಯಾದರೂ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಬಹುದು.

loading...