ಪಾರ್ಥನಹಳ್ಳಿಯಲ್ಲೊಬ್ಬ ಆಧುನಿಕ ಭೀಮ..!

0
17
loading...

ಶ್ರೀನಿವಾಸ ಪಟ್ಟಣ
ಅಥಣಿ 16: ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವಂತೆ ಅಥಣಿಯ ಹಳ್ಳಿಯ ಯುವಕನೊಬ್ಬ ಪೈಲವಾರನ ಸವಾಲು ಸ್ವೀಕರಿಸಿ ಭಾರ ಎತ್ತುವ ಸ್ಪರ್ಧೆಯಲ್ಲಿ ಅದ್ಭುತ ಸಾಹಸ ಮೆರೆದಿದ್ದಾನೆ. 20 ವರ್ಷದ ಆ ಯುವಕನೇ ಸುರೇಶ ಪರಶುರಾಮ ಕುಲ್ಲೋಳ್ಳಿ. ಇತನು ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದವನಾಗಿದ್ದು, ಕುರುಬ ಸಮುದಾಯದ ಬಡಕುಟುಂಬದಲ್ಲಿ ಹುಟ್ಟಿ ಅನಕ್ಷರಸ್ಥನಾಗಿದ್ದರೂ ಕೂಲಿ ಮಾಡಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾನೆ.

ಲತನ್ನ 13ನೇ ವಯಸ್ಸಿನ¯ಮದ ಬೀರದೇವರ ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆಯನ್ನು ತಾನು ಅದರಲ್ಲಿ ಆಸಕ್ತಿ ಹೊಂದಿದ ಈ ಬಾಲಕ ಯಾವುದೇ ತರಬೇತಿದಾರರಿಂದ ತರಬೇತಿ ಹೊಂದದೇ ಸ್ವಯಂ ಪ್ರಯತ್ನದಿಂದ ಕುಸ್ತಿ ಕಲೆ ಮತ್ತು ಭಾರ ಎತ್ತುವ ಕಲೆಗಳನ್ನು ರೂಢಿಸಿಕೊಂಡಿದ್ದಾನೆ. ಭರಮಖೋಡಿ ಗ್ರಾಮದ ಜಾತ್ರೆಯಲ್ಲಿ ಪ್ರಸಿದ್ದ ಪೈಲವಾನ ಒಬ್ಬರು ತನ್ನ ಮಗನ ಜೊತೆ ಕುಸ್ತಿಯಲ್ಲಿ ಜಯ ಸಾಧಿಸುವಂತೆ ಸವಾಲು ಹಾಕಿದಾಗ ಈ ಸುರೇಶ ಎಂಬ ಬಾಲಕ ಈ ಸವಾಲು ಸ್ವೀಕರಿಸಿ 6 ತಿಂಗಳಲ್ಲಿ ಸವಾಲು ಹಾಕಿದ ಪೈಲವಾನನ ಮಗನ ಜೊತೆ ಜಯ ಸಾಧಿಸಿ ಗ್ರಾಮಸ್ಥರ ಪ್ರಸಂಶೆಗೆ ಪಾತ್ರನಾಗಿದ್ದಾನೆ. ಕುಸ್ತಿ ಕಲೆಯನ್ನು ರೂಡಿಸಿಕೊಂಡಿರುವ ಸುರೇಶ ಅನೇಕ ಜಾತ್ರೆಗಳಲ್ಲಿ ತರಬೇತಿ ಪಡೆದ ಪೈಲವಾನ ಮಣ್ಣು ಮುಕ್ಕಿಸಿ ಸಾಧನೆ ಮಾಡಿದ್ದಾನೆ.
ತಂದೆ ಪರಶುರಾಮ, ತಾಯಿ ಮಂಗಲವ್ವ ಮತ್ತು ಅಣ್ಣ ಸೋಮನಾಥನ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆಗಳಲ್ಲಿ ಜಯ ಸಾಧಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಸಂಪಾದಿಸಿದ್ದಾನೆ.

ಲಇತ್ತೀಚಿಗೆ ಅಥಣಿ ತಾಲೂಕಿನ ನಾಗನೂರ ಪಿ.ಎ ಗ್ರಾಮದ ಬೀರೇಶ್ವರ ಜಾತ್ರೆಯಲ್ಲಿ ಈ ಯುವಕ 140 ಕೆ.ಜಿ ತೂಕದ ಜೋಳದ ಚೀಲವನ್ನು ಸಲಿಸಾಗಿ ಎತ್ತುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದನು. ಚೀಲವನ್ನು ತನ್ನ ಬೆನ್ನ ಇಟ್ಟುಕೊಂಡು ಸೂರ್ಯ ಸಮಸ್ಕಾರ (ಡೀಪ್ಸ) ಮಾಡಿದ್ದು ಮತ್ತು 140 ಕೆ.ಜಿ ತೂಕದ ಚೀಲದ ಮೇಲೆ 70 ಕೆ.ಜಿ ತೂಕದ ವ್ಯಕ್ತಿಯೊಬ್ಬರನ್ನು ಕುಳಿಸಿಕೊಂಡು ಅಂದರೆ 210 ಕೆ.ಜಿ ಭಾರ ಹೊತ್ತು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾನೆ. ಅಲ್ಲದೇ ಜಾತ್ರಾ ಕಮೀಟಿಯವರು ಘೋಷಿಸಿದ ಬಹುಮಾನವನ್ನು ಪಡೆದುಕೊಂಡರು. ಯಾವುದೇ ಪರಿಣಿತರಿಂದ ತರಬೇತಿ ಪಡೆಯದೇ ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಸಾಹಸ ಪ್ರದರ್ಶನ ಮಾಡಿದ ಈ ಯುವಕ ಸಾಧನೆಯನ್ನು ಕಂಡು ಇತನನ್ನು ಕಲಿಯುವ ಭೀಮ ಎಂದು ಕರೆಯುತ್ತಿದ್ದಾರೆ. ಇಂತಹ ಗ್ರಾಮೀಣ ಪ್ರತಿಭೆಯನ್ನು ಸರಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿ ಅಗತ್ಯ ನೆರವು, ಸೌಲಭ್ಯ ನೀಡಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಮತವಾಗಿದೆ.

loading...