ಪಿರಾಮಿಡ್‌ ಮಲ್ಲಕಂಬ ಪ್ರದರ್ಶನ

0
28
loading...

ಕಡಬಿ: ಸವದತ್ತಿ ತಾಲೂಕಿನ ಸುಕ್ಷೇತ್ರ ಗೊರಗುದ್ದಿ ಗ್ರಾಮದ ವಿಠ್ಠಪ್ಪದೇವರ ಜಾತ್ರೆ ನಿಮಿತ್ತ ಬೆಳಗ್ಗೆ ದೇವರಿಗೆ ಅಭಿಷೇಕ ಮಾಡಲಾಯಿತು. ನಂತರ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯಮೇಳದೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು. ವಿವಿಧ ಕಾರ್ಯಕ್ರಮಗಳು ದೇವರ್ಷಿ ವಿಠ್ಠಪ್ಪ ಜೊತೆನ್ನವರ ಇವರ ನೇತೃತ್ವದಲ್ಲಿ ಜರುಗಿದವು. ದಿವ್ಯಸಾನಿಧ್ಯ ಶಿವಯೋಗಿದೇವರು ಹರ್ಲಾಪೂರ. ಸಾನಿಧ್ಯ ಶಿವಾನಂದ ಮಹಾಸ್ವಾಮಿಗಳು ಗೊರವಣಕೋಳ್ಳ. ರೇವಣಸಿದ್ದೇಶ್ವರ ಅಜ್ಜನವರು ಚಿಕ್ಕೂಡಿ. ತುಕಾರಾಮ ಮಹಾರಾಜರು ಗೊರಗುದ್ದಿ. ಅಧ್ಯಕ್ಷತೆ ಬಸಯ್ಯಾ ಹಿರೇಮಠ. ಮುಖ್ಯ ಅತಿಥಿಗಳಾಗಿ ವಿದ್ಯಾರಾಣಿ ಸೊನ್ನದ ಮತ್ತು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಸದ್ಬಕ್ತರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಜಾತ್ರೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ತಂಡದವರಿಂದ ಕೋನಾಸನದ ಪಿರಾಮಿಡ್‌ ಮಲ್ಲಕಂಬ ಹಾಗೂ ವಿವಿಧ ಬಂಗಿಗಳನ್ನು ಪ್ರದರ್ಶಸಿದರು. ಮಲ್ಲಕಂಬ ತಂಡದ ಶಿಕ್ಷಕರಾದ ಬಸವರಾಜಕುದರಿ. ನಿಂಗಮ್ಮಾ ಜಂಬಗಿ. ಲಕ್ಷ್ಮೀ ಕುದರಿ. ಕಮಲಾ ಕುದರಿ ಹಾಗೂ ತಂಡದ ಎಲ್ಲಾ ಸದಸ್ಯರು ಇದ್ದರು.

loading...