ಪೊಲೀಸರು ಆರೋಗ್ಯಕ್ಕೆ ಒತ್ತು ನೀಡಿ: ನಾಗರಾಜ

0
25
loading...

ಹುಬ್ಬಳ್ಳಿ: ನಿತ್ಯ ಜೀವನದ ಒತ್ತಡದ ಬದುಕಿನಲ್ಲಿ ಪೊಲೀಸರು ಆರ್ಯೋಗದ ಕಡೆ ನಿರ್ಲಕ್ಷ್ಯ ವಹಿಸುವುದು ಸಾಮನ್ಯ. ಕರ್ತವ್ಯದ ನಡುವೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕ ಅವರಿಗೂ ತಮ್ಮದೆ ಅದ ಬದುಕಿದೆ ಎಂದು ಪೊಲೀಸ್ ಕಮಿಷನರ್ ಎಂ.ಎನ್ ನಾಗರಾಜ ಹೇಳಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್, ಇಂಡಿಯನ್ ರೆಡ್ ಕ್ರಾಸ್ ಬಿಡಿಕೆ ಮೇಯರ್ ಮತ್ತು ಶಿವರುದ್ರಪ್ಪ ಟ್ರಸ್ಟ್ ಸಹಯೋಗದೊಂದಿಗೆ ಉತ್ತರ ಸಂಚಾರ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಉತ್ತಮ. ಆರೋಗ್ಯವು ಚೆನ್ನಗಿರುತ್ತದೆ ಎಂದು ಹೇಳಿದರು. ಉತ್ತರ ದಕ್ಷಿಣ ಮತ್ತು ಪೂರ್ವ ವಲಯ ಮತ್ತಷ್ಟು ವೃದ್ಧಿಸಲಿದೆ’ ಜನರ ಅನಕೊಲಕ್ಕೆ ಸದಾ ಸಿದ್ದ ಎಂದರು. ಸಂಚಾರ ಠಾಣೆಗಳ ಸಿಬ್ಬಂದಿ ಮತ್ತು ಖಾಸಗಿ ವಾಹನ ಚಾಲಕರು ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. 25 ಪೊಲೀಸ್ ಸಿಬ್ಬಂದಿ ರಕ್ತದಾನ ಮಾಡಿದರು. ಹಿರಿಯ ವೈದ್ಯ ಡಾ.ವಿ.ಬಿ. ನಿಟಾಲಿ ಮತ್ತು ಡಾ.ಮಹೇಶ ರಾಯ್ಕರ ಅವರ ತಂಡ ಆರೋಗ್ಯ ತಪಾಸಣೆ ನಡೆಸಿತು. ಡಿಸಿಪಿ ಬಿ.ಎಸ್.ನೇಮಗೌಡ,ಎಪಿಸಿ ಎಂ.ವಿ ನಾಗನೂರ, ಉತ್ತರ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಎ.ಬಿ. ಜಮಾದಾರ, ಪೂರ್ವ ಸಂಚಾರ ಠಾಣೆ ಇನ್‍ಸ್ಪಕ್ಟರ್ ಶ್ರೀಪಾದ ಜಲ್ದೆ ಮತ್ತು ದಕ್ಷಿಣ ಸಂಚಾರ ಠಾಣೆ ಇನ್‍ಸ್ಪೆಕ್ಟರ ಶಿವಪ್ರಕಾಶ ನಾಯ್ಕ ಅಧಿಕಾರಿಗಳು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೋಂಡದ್ದರು.

loading...