ಪೋಷಕರು ಮಕ್ಕಳಿ ಪ್ರತಿಭೆಗೆ ಪ್ರೋತ್ಸಾಹ ನೀಡಿ: ಡಾ.ವಿವೇಕ

0
43
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಹದಿನೈದು ದಿನದಲ್ಲಿ ಮಕ್ಕಳು ಗಿಟಾರ್ ಬಾರಿಸಿರುವುದು,85 ವಿದ್ಯಾರ್ಥಿಗಳು ಒಟ್ಟಾಗಿ ಹಾಡಿರುವುದು, ಭರತನಾಟ್ಯ ಕಲಿತಿರುವುದು ಒಂದು ಸಾಹಸ. ಪೋಷಕರು ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರೆ ಮಕ್ಕಳು ಸಾಧನೆ ಮಾಡುತ್ತಾರೆ ಎಂದು ಕಾಹೆರನ ಕುಲಪತಿ ಡಾ.ವಿವೇಕ ಸಾವೊಜಿ ಹೇಳಿದರು.
ನಗರದಲ್ಲಿ ಬುಧವಾರ ಕಾಹೆರನ ಸಂಗೀತ ಶಾಲೆಯ ದಶಮಾನೋತ್ಸವ ವರ್ಷದ ನಿಮಿತ್ತ 7 ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ 15 ದಿನಗಳ 5ನೇ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.
15 ದಿನದಲ್ಲಿ ಮಕ್ಕಳು ಗಿಟಾರ್ ಬಾರಿಸಿರುವುದು, 85 ವಿದ್ಯಾರ್ಥಿಗಳು ಒಟ್ಟಾಗಿ ಹಾಡಿರುವುದು ಭರತನಾಟ್ಯ ಕಲಿತಿರುವುದು ಒಂದು ಸಾಹಸ. ಪೊಷಕರು ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರೆ ಮಕ್ಕಳು ಸಾಧನಯನ್ನ ಮಾಡುತ್ತಾರೆ. ಅವರ ಸರ್ವತೊಮುಖ ಬೆಳವಣಿಗೆಗೆ ಉತ್ತಮ ವಾತವರಣ ಕಲ್ಪಿಸಬೇಕು, ಕೆಎಲ್‍ಇ ಸಂಸ್ಥೆ ಯಾವತ್ತು ಮಕ್ಕಳ ಪ್ರತಿಭೆಗೆ ಸಹಕರಿಸುತ್ತಿದೆ ಎಂದು ಹೇಳಿದರು
ಶಿಬಿರದಲ್ಲಿ ತರಬೇತಿ ಪಡೆದ 85 ಮಕ್ಕಳು ಸಂಗಿತ, ದೇಶಭಕ್ತಿ ಗೀತೆ, ಚಲನಚಿತ್ರ ಗೀತೆ, ಲಘು ಸಂಗೀತ, ಶಾಸ್ತ್ರೀಯ ಸಂಗೀತ, ಗಿಟಾರ್, ಮತ್ತು ಭರತನಾಟ್ಯಂ ಪ್ರಸ್ತುತ ಪಡಿಸಿ ನೆರೆದ ಪ್ರೇಕ್ಷಕರ ಹಾಗು ಪೋಷಕರ ಮನಕಲುಕಿದರು.
ವಿಶೇಷ ಅತಿಥಿಗಳಾದ ಕುಲಸಚಿವ ಡಾ.ವಿ.ಡಿ ಪಾಟೀಲ, ಡಾ.ರಾಜೇಂದ್ರ ಬಾಂಡಣಕರ್ ಪ್ರಾಂಶುಪಾಲರಾದ ಡಾ.ಸ್ನೇಹ ರಾಜೊರಿಕರ್ ತರಬೇತುದಾರರಾದ ಸುನೀತ ಪಾಟೀಲ್, ಡಾ.ದುರ್ಗಾ ಕಾಮತ್ ನಾಡಕರ್ಣಿ, ಸೀಮಾ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

loading...