ಪೌರಕಾರ್ಮಿಕರು ಬಾಕಿ ವೇತನ ನೀಡುವಂತೆ ಮನವಿ

0
26
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಪೌರಕಾರ್ಮಿಕರು ಸೇವೆಯಿಂದ ದೂರವುಳಿದು ನಡೆಸುತ್ತಿರುವ ಮುಷ್ಕರ 7ನೇ ದಿನವು ಮುಂದುವರೆದಿದೆ.
ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ಪೌರಕಾರ್ಮಿಕರಿಗೆ ನಾಲ್ಕು ತಿಂಗಳಿನಿಂದ ವೇತನ ನೀಡಲು ಪೌರಕಾರ್ಮಿಕರು ಹಾಗೂ ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕ ಸಂಘ (ಸಿಐಟಿಯು) ವತಿಯಿಂದ ಸೋಮವಾರ ಕಾರ್ಮಿಕ ಇಲಾಖೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಅಧ್ಯಕ್ಷ ಲಕ್ಷ್ಮಣ ಹಂದ್ರಾಳ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಕಳೆದ 10-15 ವರ್ಷಗಳಿಂದ ಪೌರ ಕಾರ್ಮಿಕರು ಮನೆ, ಮನೆ ಕಸ ಸಂಗ್ರಹಕಾರರು, ಲೋಡರ್‌ ಡ್ರೈವರ್‌ ಹೀಗೆ ಹಲವು ಕೆಲಸಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತ ಬಂದಿರುತ್ತೇವೆ. ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಗೆ ಭವಿಷ್ಯ ನಿಧಿ ಇ.ಎಸ್‌.ಐ ಪಾಲಿಕೆ ವಂತಿಗೆ ಭರಣಾ ಮಾಡುವಂತೆ ಆದೇಶ ನೀಡಿದೆ. ಆದರೆ ಪಾಲಿಕೆ ಆಡಳಿತ ಗುತ್ತಿಗೆಯನ್ನು ಮುಂದುವರೆಸಿ ಪಿಎಫ್‌.ಇ.ಎಸ್‌.ಐ ಗಳಂತಹ ಸಾಮಾಜಿಕ ಭದ್ರತೆಯಿಂದ ಪೌರ ಕಾರ್ಮಿರಿಗೆ ವಂಚಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನ ಪಾವತಿಸಬೇಕೆಂಬ ಆದೇಶ ವಿದ್ದರೂ ಮೂರು ನಾಲ್ಕು ತಿಂಗಳಿಗೊಮ್ಮೆ ಅರೆ ಬರೆ ವೇತನ ಕೊಡಲಾಗುತ್ತದೆ. ಭವಿಷ್ಯ ನಿಧಿ ಮತ್ತು ಇಎಸ್‌ಐ ಮಾಡುವ ಕುರಿತು ಯಾವುದೇ ರುಜುವಾತು ಇರುವುದಿಲ್ಲ. ಸರ್ಕಾರ ಪೌರ ಕಾರ್ಮಿಕರಿಗೆ ಕಾಯಂ ಮಾಡುವುದಾಗಿ ಘೋಷಿಸಿದೆ. ಆದರೆ ಮಹಾನಗರ ಪಾಲಿಕೆ ಆದೇಶ ಗಾಳಿಗೆ ತೂರಿ, ಪೌರ ಕಾರ್ಮಿಕರ ಜೀವನದ ಮೇಲೆ ಬರೆ ಎಳೆದಿದ್ದೆ ಎಂದು ಆಕ್ರೋಶ ವ್ಯಕ್ತಪಡೆಸಿದರು.

ಈ ಸಂದರ್ಭದಲ್ಲಿ ದಯಾನಂದ ಅಲಿಯಾಬಾದಿ, ಗುರಪ್ಪ ದಲಾಲ, ಲಕ್ಷ್ಮಣ ದಲಾಲ, ರಫಿಕ ಲಕ್ಷರಿ, ತಿಮ್ಮವ್ವ ಮುದ್ದೇಬಿಹಾಳ, ರುಕ್ಮವ್ವ ವಾಗ್ಮೋರೆ, ಸದಾಶಿವ ಚಂಚಲಕರ, ಸುಶಿಲಾ ಚಿಕಮಠ, ಮೀನಾಕ್ಷಿ ಪರೆಪ್ಪಗೋಳ, ಬಾಸ್ಕರ ಬೋರಗಿ, ಮನೋಹರ ಚವ್ಹಾಣ, ರವಿ ರೋಣಿಹಾಳ, ಭೀಮು ಪೂಜೇರಿ, ಕಮಲಾಬಾಯಿ ಹರಿಜನ ಮುಂತಾದವರು ಭಾಗವಹಿಸಿದ್ದರು.

loading...