ಪ್ರಚಾರಕ್ಕೂ ಪೂರ್ವ ಅನುಮತಿ ಪಡೆಯಬೇಕು: ಸಿದ್ದೇಶ್ವರ

0
30
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ತಾಲೂಕಿನಲ್ಲಿ ಕಟ್ಟೆಚ್ಚರ ಹಾಕಲಾಗಿದ್ದು, ಚುನಾವಣೆಯ ಹಿನ್ನೆಲೆ ಯಾವುದೇ ರಾಜಕೀಯ ಪಕ್ಷಗಳು ಸಭೆ, ಸಮಾರಂಭ, ರ್ಯಾಲಿ ನಡೆಸುವ ಪೂರ್ವದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಮರ್ಪಕವಾದ ಮಾಹಿತಿಯೊಂದಿಗೆ ಪೂರ್ವದಲ್ಲಿ ಅನುಮತಿಯನ್ನು ಪಡೆದು ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು ಒಂದು ವೇಳೆ ನೀತಿ ಸಂಹಿತೆಯ ಉಲ್ಲಂಘನೆಯಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭಟ್ಕಳ ಸಹಾಯಕ ಆಯುಕ್ತ ಸಿದ್ದೇಶ್ವರ ಎನ್‌. ಹೇಳಿದರು.
‘ಕಳೆದ ಮಾರ್ಚ 27ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮುಂದಿನ ತಿಂಗಳು ಮೇ 12 ರಂದು ಚುನಾವಣೆಯನ್ನು ನಿಗದಿಯಾಗಿದೆ. ಚುನಾವಣಾ ನಿಮಿತ್ತ ತಾಲೂಕಿನಾದ್ಯಂತ ಕಾನೂನಿನ ಕಟ್ಟೆಚ್ಚರವನ್ನು ವಹಿಸಿಲಾಗಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ.

ಚುನಾವಣಾ ಪ್ರಚಾರಕ್ಕಾಗಿ ಸರಕಾರಿ ವಾಹನ ಹಾಗು ಸರಕಾರಿ ಕಛೇರಿಗಳನ್ನು ನಿಷೇಧಿಸಲಾಗಿದೆ. ಸುವಿದಾ ಹಾಗು ಪ್ರಮಾದ ಎನ್ನುವ ಆಪ್‌ಗಳಿದ್ದು, ಇಲ್ಲಿ 7 ರಿಂದ 8 ಅಪ್ಲಿಕೇಶನಗಳನ್ನು ಸಲ್ಲಿಸಬಹುದಾಗಿದೆ. ಸುವಿದಾ ಆಪ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಪ್ರಮಾದ ಆಪ್‌ನಲ್ಲಿ ದೂರನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದ ಅವರು ಪಕ್ಷಗಳು ಚುನಾವಣಾ ನೀತಿ ಸಂಹಿತೆಯನ್ನು ಖಡಾ ಖಂಡಿತವಾಗಿ ಪಾಲಿಸಲೇಬೇಕು. ನೀತಿ ಸಂಹಿತೆಯನ್ನು ಪಾಲಿಸದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳವಾಗುವುದು ಎಂದು ಹೇಳಿದರು. ಹೊನ್ನಾವರ, ಕುಮಟಾ ಶಿರಸಿ ಕಾರವಾರದಲ್ಲಿ ಯಾವುದೇ ಮಾಹಿತಿಗಳನ್ನು ನೀಡದೇ ಪರವಾನಿಗೆಯನ್ನು ಪಡೆಯದೇ ಸಭೆ ಸಮಾರಂಭವನ್ನು ನಡೆಸಲಾಗುತ್ತದೆ. ಅದು ನೀತಿ ಸಂಹಿತೆ ಉಲ್ಲಂಘನೆಯಲ್ಲವೇ? ಉಲ್ಲಂಘನೆ ಆದರು ಕೂಡ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಭೆಯಲ್ಲಿ ಭÀಟ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಠ್ಠಲ ನಾಯ್ಕ ದೂರಿದರು.

loading...