ಪ್ರಜಾಪ್ರಭುತ್ವದ ಉಳಿವಿಗಾಗಿ ರಥ ಎಳೆಯುವ ಕೆಲಸ ಮಾಡಬೇಕಾಗಿದೆ: ಮೂಲಿಮನಿ

0
29
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಈ ದೇಶದಲ್ಲಿ ಪ್ರಜಾಪ್ರಭುತ್ವ ಎಂಬ ಕಲ್ಪನೆಯನ್ನು ಪ್ರಪ್ರಥಮವಾಗಿ ಜಾರಿಗೆ ತಂದವರೇ ಡಾ. ಬಿ.ಆರ್.ಅಂಬೇಡ್ಕರವರು. ಇಂದು ಕೆಲವರಿಗೆ ಅವರು ರಚಿಸಿದ ಸಂವಿದಾನ, ಪ್ರಜಾಪ್ರಭುತ್ವ ವಿಚಾರಗಳು ಅಪಥ್ಯವಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆ. ಸಂವಿದಾನದ ರಕ್ಷಣೆಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಅಂಬೇಡ್ಕರರ ವಿಚಾರಧಾರೆಗಳ ರಥವನ್ನು ಎಲ್ಲರೂ ಒಂದಾಗಿ ಎಳೆಯುವ ಕೆಲಸ ಮಾಡಬೇಕಾಗಿದೆ ಎಂದು ಕರ್ನಟಕ ವಿಶ್ವ ವಿದ್ಯಾಲಯದ ಪ್ರಾದ್ಯಾಪಕ ಡಾ. ಅರವಿಂದ ಮೂಲಿಮನಿ ನುಡಿದರು.

ಅವರು ಕರ್ನಾಟಕ ರಾಜ್ಯ ಪರಿಶಿಷ್ಠ ಜಾತಿ ಹಾಗೂ ವರ್ಗಗಳ ನೌಕರರ ಒಕ್ಕೂಟದ ಉತ್ತರ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಂಡೇಲಿ ತಾಲೂಕು ಘಟಕಗಳ ಆಶ್ರಯದಲ್ಲಿ ದಾಂಡೇಲಿಯ ರಂಗನಾಥ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರವರ 127 ನೇ ಜಿಲ್ಲಾ ಮಟ್ಟದ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಆರ್.ಪಿ. ರೇವಣಕರ, ಹೊನ್ನಾವರ ಘಟಕಾಧ್ಯಕ್ಷ ಬಿ. ಕೃಷ್ಣಾ, ದಾಂಡೇಲಿ ಘಟಕದ ಅಧ್ಯಕ್ಷ ಭೀಮಾಶಂಖರ ಅಜನಾಳ, ಪ್ರಧಾನ ಕಾರ್ಯದರ್ಶಿ ಶ್ರೀಮಂತ ಮದರಿ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್‍ನಲ್ಲಿ ರಾಜ್ಯ ಪ್ರಶಸ್ತಿ ಪಡೆದ ಜಿ.ವೈ ತಳವಾರ, ಹಾಗೂ ನೋಟರಿ ರಾಜಶೇಖರ ಐ.ಎಚ್. ರವರನ್ನು ಅಭಿನಂದಿಸಲಾಯಿತು. ಮಾನಸಾ ಬಿ. ವಾಸರೆಯ ಆಶಯಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ.ಜಾತಿ ವರ್ಗಗಳ ನೌಕರರ ಒಕ್ಕೂಟದ ದಾಂಡೇಲಿ ಘಟಕದ ಅಧ್ಯಕ್ಷ ಭೀಮಾಶಂಕರ ಅಜನಾಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀಮಂತ ಮದರಿ, ಸದಸ್ಯ ರಾಜೇಂದ್ರ ಸೊಲ್ಲಾಪುರಿ ಅತಿಥಿಗಳನ್ನು ಪರಿಚಯಿಸಿದರು. ಒಕ್ಕೂಟದ ಸಹಕಾರ್ಯದರ್ಶಿ ಮಂಜನಾಥ ಕಾದ್ರೊಳ್ಳಿ ವಂದಿಸಿದರು. ರಮೇಶ ಪಾಟೀಲ ನಿರೂಪಿಸಿದರು.

loading...