ಪ್ರಧಾನಿ ಲೈವ್‌ ಕಾನ್ಫೆರೆನ್ಸ್‌ನಲ್ಲಿ ಮಾತನಾಡಿದ,ಶಾಸಕಿ ಜೊಲ್ಲೆ

0
25
loading...

ನಿಪ್ಪಾಣಿ: ಶಾಸಕಿ ಶಶಿಕಲಾ ಜೊಲ್ಲೆ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿಜೀಯವರ ಜೊತೆ ಲೈವ್‌ ಕಾನ್ಫೆರೆನ್ಸ್‌ ಮಾತನಾಡಿ ಭಾರತವನ್ನು ರೈತರ ದೇಶವೆಂದು ಪರಿಗಣಿಸುವುದರೊಂದಿಗೆ ಈ ದೇಶದ ಆಧಾರಸ್ಥಂಬವೆಂದು ಹೇಳಲಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ರೈತರಿಗೆ ಹಲವಾರು ಕಷ್ಟಗಳು ಎದುರಾಗಿದ್ದು, ಅವರ ಆತ್ಮಹತ್ಯೆ ತಡೆಗಟ್ಟುವಲ್ಲಿ ಹಾಗು ಅವರ ಬೆಳೆಗಳಿಗೆ ದ್ವಿಗುಣ ಬೆಲೆ ದೊರಕಿಸುವಲ್ಲಿ ಯಾವ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಿರಿ ಎಂದು ಶಾಸಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿಯವರು ದೇಶದ ಬೆನ್ನೆಲುಬು ರೈತರ ಬಗೆಗಿನ ಪ್ರಶ್ನೆ ಅತ್ಯಂತ ಮಹತ್ವಪೂರ್ಣವಾಗಿದ್ದು, ರೈತರಿಗಾಗಿ ಹಾಗೂ ರೈತರ ಪ್ರಗತಿಗಾಗಿ ಕಡಿಮೆ ಖರ್ಚಿನಲ್ಲಿ ಅಭಿವೃದ್ಧಿ ಹೊಂದಲು ಹಾಗೂ ಫಸಲ ಬೀಮಾ ಯೋಜನೆಯಡಿ ರೈತರಿಗೆ ಆರ್ಥಿಕವಾಗಿ ಸಬಲರಾಗುವಂತಹ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅದು ರೈತರಿಗೆ ಪೂರಕವಾಗಿದೆ. ಎಮ.ಎಸ್‌.ಬಿ ಯೋಜನೆಯಡಿಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಪೂರ್ಣ ಪ್ರಮಾಣದಲ್ಲಿ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ಮೇಲೆ ರೈತಬಾಂದವರ ಕಲ್ಯಾನಕ್ಕಾಗಿ ಎಮ.ಎಸ್‌. ಬಿ. ಯೊಜನೆಯನ್ನು ಜಾರಿಗೆ ತಂದು ರೈತರಿಗೆ ಸುವರ್ಣಾವಕಾಶ ಕಲ್ಪಿಸಲಾಗುವುದು. ಕರ್ನಾಟಕದಲ್ಲಿ ಹೇರಳವಾಗಿ ಬೆಳೆಯುವ ಚಂದನಕ್ಕೆ ಪ್ರಾಮುಖ್ಯತೆ ನೀಡಿದ್ದು, ಆಸ್ಟ್ರೇಲಿಯಾದಲ್ಲಿ ಕರ್ನಾಟಕದ ಚಂದನವನ್ನು ಹೇರಳವಾಗಿ ಬೆಳೆಸಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಅವರ ಆರ್ಥಿಕತೆಗೆ ಕರ್ನಾಟಕವನ್ನು ಹೊಲಿಕೆ ಮಾಡಲಾಗುತ್ತಿದೆ. ಸಮಾಜದ ಹೊಟ್ಟೆ ತುಂಬಿಸುವ, ರೈತರ ಸಾಮಾನ್ಯ ನಾಗರಿಕರ ಹಸಿವನ್ನು ನೀಗಿಸುವ ಭೂಮಿ ತಾಯಿಯ ಫಲವತ್ತತೆಯ ಗುಣಮಟ್ಟ ಹಾಗೂ ಅತೀ ಹೆಚ್ಚಿನ ಬೆಳೆ ಬೆಳೆಯಲಿಕ್ಕೆ ಮಣ್ಣಿನ ಪರೀಕ್ಷೆ ಮಾಡಿ ಯೋಗ್ಯವಾದ ಸಲಹೆಗಳನ್ನು ನೀಡುವಂತಹ ಕಾರ್ಯ ಮಾಡಲಾಗುತ್ತಿದೆ. ಬೇವು ಲೇಪಿತ ಯುರಿಯಾದ ಬಳಕೆಯಿಂದ ರೈತರ ಬೇಳೆಯಲ್ಲಿ ಸುಮಾರು ಐದರಷ್ಟು ದ್ವಿಗುಣವಾಗಲಿದೆ. ಬೆಳೆ ಅಧಿಕತೆಗೆ ಹಾಗೂ ವಿದ್ಯುತ್‌ ಕಡಿತದ ಸಮಸ್ಯೆ ನಿವಾರಣೆಗೆ ಪ್ರತಿ ರೈತರಿಗೂ ಸೋಲಾರ ಪಂಪ್‌ ಮೂಲಕ ಜಮೀನುಗಳಿಗೆ ಹನಿ ನೀರಾವರಿ, ಹಾಗೂ ಸಮರ್ಪಕವಾಗಿ ನೀರುಣಿಸುವ ಕಾರ್ಯ ಮಾಡಲಾಗುವುದು. ಕರ್ನಾಟಕದ ಜನ ದೇಶದ ಜನರಿಗೆ ಆಹಾರವನ್ನು ನೀಡುವ ಸಾಮರ್ಥ್ಯ ಹೊಂದಿದ್ದು, ಜೇನು ಸಾಕಾಣಿಗೆ ಇರುವಂತಹ ಮಹತ್ವವನ್ನು ಅರಿತು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಸಮುದ್ರದ ನೀರನ್ನು ಬಳಸಿಕೊಂಡು ರೈತರ ಜಮೀನುಗಳಿಗೆ ಬೇಕಾಗುವಂತಹ ರಾಸಾಯನಿಕಗಳನ್ನು, ಹಾಗೂ ಔಷದೋಪಚಾರಕ್ಕಾಗಿ ಯೋಜನೆಗಳನ್ನು ಮಾಡಲಾಗುತ್ತಿದೆ. ಅಲ್ಲದೇ ದೇಶದ ಸುಖ ಬಯಸುವ ರೈತರ ಪ್ರತಿ ಸಮಸ್ಯೆಗಳನ್ನು ಅರಿತು ಅವರ ಪ್ರಗತಿಗೆ ಹಾಗು ಅವರ ವಿಕಾಸಕ್ಕೆ ಸದಾ ಶ್ರಮಿಸುವುದಾಗಿ ಅವರು ಹೇಳಿದರು.

loading...