ಪ್ರವೀಣ ತೋಗಾಡಿಯಾ ಉಚ್ಛಾಟನೆ : ಮುತಾಲಿಕ ಅಸಮಾಧಾನ

0
72
ಕನ್ನಡಮ್ಮ ಸುದ್ದಿ -ಬೆಳಗಾವಿ: ಬಹು ಭಾಷಾ ನಟ  ಪ್ರಕಾಶ ರೈ ಬಿಜೆಪಿ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದು, ಕಾಂಗ್ರೆಸ್ ಎಜೆಂಟ್’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ರೀ ರಾಮ ಸೇನೆಯ ಪ್ರಮೋದ ಮುತಾಲಿಕ ಆರೋಪಿಸಿದರು.
ಅವರು ಸೋಮವಾರದಂದು ಮಾದ್ಯಮದೊಂದಿಗೆ ಮಾತನಾಡಿ, ಡಾ.ಪ್ರವೀಣ ತೋಗಾಡಿಯಾ ಅವರನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟಣೆ ಮಾಡಿದ್ದಾರೆ. ಇದು ದೇಶ ದ್ರೋಹ ಕೆಲಸವಾಗಿದೆ.೩೨ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದ ಅವರನ್ನು ಉಚ್ಛಾಟನೆ ಮಾಡಲು ಆರ್ ಎಸ್ ಎಸ್ ಹಾಗೂ ಮೋದಿಯವರು ಕಾರಣವೆಂದು. ಅವರಿಗೆ ಅನ್ಯಾಯವಾಗಿದೆ.
೧೭ರಂದು ಗುಜರಾತಿನ ಅಹ್ಮದಾಬಾದಿನಲ್ಲಿ ಪ್ರವೀಣಭಾಯಿ ತೋಗಾಡಿಯಾ ಉಪವಾಸ ಕೈಗೊಳ್ಳಲ್ಲಿದ್ದಾರೆ. ಅಂದು ಶ್ರೀ ರಾಮ ಸೇನೆ ಸೇರಿದಂತೆ ಐದು ಹಿಂದು ಸಂಘಟನೆಗಳು ಬೆಂಬಲ ನೀಡಿ ರಾಜ್ಯದ ೨೨ ಜಿಲ್ಲೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ತಾವು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರವಿದ್ದಾಗಲೇ ಗೌರಿ ಲಂಕೇಶ, ಡಾ. ಎಂ.ಎಂ.ಕಲಬುರ್ಗಿ ಹತ್ಯೆಯಂತ ಕೃತ್ಯಗಳು ನಡೆದಿರುವುದು ಅವರ ಬಗ್ಗೆ ಮಾತನಾಡದೆ ಇರುವ ಪ್ರಕಾಶ ರೈ ಹಿಂದು ಸಂಘಟನೆ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಕಾವೇರಿ, ಕೃಷ್ಣಾ, ಮಹಾದಾಯಿ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಮುತಾಲಿಕ ಪ್ರಕಾಶ ರೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಸವರಾಜ ಸಿದ್ದಲಿಂಗಪ್ಪನ್ನವರ, ಸೋಮಶೇಖರ ಮಠಪತಿ, ಅರವಿಂದ ದೇಶಪಾಂಡೆ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
loading...