ಪ್ರೇಕ್ಷಕರ ಮನಗೆದ್ದ ಪ್ರಚಂಡ ಕೌಶಿಕ ನಾಟಕ

0
24
@heggarprashant
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ತಾಲೂಕಿನ ಗುಳ್ಳಾಫುರ ಸಮೀಪದ ಹಳವಳ್ಳಿಯ ಸಿಧ್ಧಿವಿನಾಯಕ ದೇವರ ದಶಮಾನೋತ್ಸವ ವರ್ಧಂತಿಯ ಅಂಗವಾಗಿ ನಡೆದ ವೈದಿಕ ಕಾರ್ಯಕ್ರಮಗಳೊಂದಿಗಿನ ಮನರಂಜನಾ ಕಾರ್ಯಕ್ರಮವಾಗಿ ಸಿಧ್ಧಾಪುರದ ರಂಗಸೌಗಂಧ ತಂಡದವರು ಹಳವಳ್ಳಿಯ ಸಾಧನಾ ಸಭಾಭವನದಲ್ಲಿ ನಡೆಸಿಕೊಟ್ಟ ಪ್ರಚಂಡ ಕೌಶಿಕ ನಾಟಕ ಪ್ರೇಕ್ಷಕರ ಮನಗೆದ್ದಿತು.
ಪ್ರಚಂಡ ಕೌಶಿಕ: ಪ್ರಚಂಡ ಕೌಶಿಕ ಎಂಬುದು ಒಂದು ಸುಂಧರ, ಅರ್ಥಪೂರ್ಣ ಪೌರಾಣಿಕ ನಾಟಕ. ಜಿಲ್ಲೆಯ ಸಿದ್ದಾಪುರ ತಾಲೂಕಿನ ದಿವಂಗತ ವಿ ಜಿ ಭಟ್ಟ ಬಳಗುಳಿ( ಸುದ್ದಿ ಟಿ ವಿ ಸಂಪಾದಕ ಶಶಿಧರ ಭಟ್ಟರ ತಂದೆ) ರಚಿಸಿದ ನಾಟಕ ಇದು . ಇಂದಿಗೂ ಪ್ರಸ್ತುತವಾದ ನಾಟಕ ಕೃತಿಯಾಗಿದೆ. ಪ್ರಚಂಡ ಕೌಶಿಕ ನಾಟಕದ ಕೆಲ ದೃಷ್ಯಗಳುನೀಲಿ ಹಿನ್ನೆಲೆಯ ಪರದೆಯ ಮುಂದೆ ಪರ್ಣಕುಟಿಯ ರಚನೆ, ಪಕ್ಕದಲ್ಲೊಂದು ವಟ ವೃಕ್ಷ, ಅಕ್ಕ ಪಕ್ಕದಲ್ಲಿ ಸುಳಿದಾಡುವ ವಟುಗಳು,ಋಷಿಗಳು, ಅವರ ಕೈಯಲ್ಲಿನ ಮಂತ್ರದಂಡದಿಂದ ಮಿನುಗುವ ಬಣ್ಣದ ಬೆಳಕುಗಳು, ರೌದ್ರ, ಶಾಂತ, ಕಾರುಣ್ಯ, ಶೃಂಗಾರ ರಸದ ಪರಮೋಚ್ಛಗಳು, ಅವರಾಡುವ ಮಾತುಗಳೋ ಸಾಹಿತ್ಯದ ಮೇರು ಶಬ್ದಗಳನ್ನು ಬಳಸಿ ಪೋಣಿಸಿದ ಮುತ್ತುಗಳು, ಕಥೆಯೊಂದಿಗೆ ನೀತಿಯನ್ನು ಸಾರುವ ಮಾತುಗಳು, ಇವೆಲ್ಲ ತ್ರೇತಾಯುಗದ ಕಲ್ಪನೆಯಲ್ಲ, ಆದರೆ ಅಂತದ್ದೇ ಒಂದು ಕಲ್ಪನೆಯನ್ನು ರಂಗಕ್ಕೆ ಸಾಕ್ಷಾತ್ಕರಿಸಿದ ಕೀರ್ತಿ ತಂಡದ್ದಾಗಿದೆ.
ಪುರಾಣಲೋಕವನ್ನು ಧರೆಗಿಳಿಸಿದ ಕಲಾವಿದರು: ಸಾಮಾಜಿಕ ನಾಟಕಗಳ ಹೆಸರಿನಲ್ಲಿ ಕೇವಲ ದ್ವಂದ್ವಾರ್ಥ ಸಂಭಾಷಣೆಯ ನಾಟಕಗಳ ಪ್ರದರ್ಶನವೇ ಹೆಚ್ಚಾದ ಇಂದಿನ ಕಾಲದಲ್ಲಿ ಪೌರಾಣಿಕ ನಾಟಕವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ ರಂಗಸೌಗಂಧದ ಕಲಾವಿದರು ನಿಜಕ್ಕೂ ಅಭಿನಂದನಾರ್ಹರು.
ರಾಜೇಂದ್ರ ಕೊಳಗಿ ರವರ ಗೀತ ರಚನೆ ಮತ್ತೂ ಸಂಗೀತ ನಿರ್ದೇಶನಕ್ಕೆ ಜಯರಾಂ ಭಟ್ಟ ಹೆಗ್ಗಾರಳ್ಳಿ ಹಾಗೂ ಶಶಿಭೂಷಣ ತಂಗಾರಮನೆ ಉತ್ತಮ ಸಂಗೀತ ನಿರ್ವಹಣೆ ಮಾಡಿದರು. ವಿಶ್ವಾಮಿತ್ರ ಮತ್ತು ಮೇನಕೆಯ ಪಾತ್ರಧಾರಿಗಳು ತಾವೇ ಸ್ವತಃ ರಂಗಗೀತೆಯನ್ನು ಹಾಡಿ ರಂಜಿಸುತ್ತಿದ್ದುದು ವಿಶೇಷವಾಗಿತ್ತು.ನಾಗರಾಜ ಭಂಢಾರಿ ರವರ ಬೆಳಕು ಮತ್ತು ಧ್ವನಿವರ್ಧಕ ಉತ್ತಮವಾಗಿತ್ತು.

loading...