ಬಸ್‌ನಲ್ಲಿ ಅಕ್ರಮ ಮದ್ಯ ಸಾಗಾಟ : ವಶ

0
46
loading...

ನರಗುಂದ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮೋಬೈಲ್‌ ಸ್ಕಾ÷್ವಡ್‌ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡರು.
ಪಟ್ಟಣದಿಂದ ಮುನವಳ್ಳಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಪಟ್ಟಣದ ಹೊರವಲಯದಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ಬಳಿ ಪರಿಶೀಲನೆ ನಡೆಸಿದ ಚೆಕ್‌ಪೋಸ್ಟ್‌ ಅಧಿಕಾರಿಗಳು ತರಕಾರಿ ಚೀಲದಲ್ಲಿದ್ದ 96 ಹೈವಡ್ರ್ಸ ವಿಸ್ಕಿ ಹಾಗೂ 24 ಓಟಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು, ಮುಂದಿನ ಕ್ರಮಕೈಗೊಳ್ಳಲು ಸಹಾಯಕ ಚುನಾವಣೆ ಅಧಿಕಾರಿಗೆ ವರದಿ ಸಲ್ಲಿಸಿದರು.
ಮದ್ಯವನ್ನು ಯಾರು ಸಾಗಿಸುತ್ತಿದ್ದರೆಂದು ಚೆಕ್‌ಪೋಸ್ಟ್‌ ಅಧಿಕಾರಿಗಳು ಪರಿಶೀಲನೆ ನಡಿಸಿದ ಸಂದರ್ಭದಲ್ಲಿ ಮಾಹಿತಿ ದೊರೆಯಲಿಲ್ಲ. ಚುನಾವಣೆ ಸಹಾಯಕ ಅಧಿಕಾರಿ ಆರ್‌.ವ್ಹಿ. ಕಟ್ಟಿ ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ಮಾಹಿತಿ ಮಡೆದು ಕ್ರಮ ಕೈಗೊಳ್ಳಲು ಚುನಾವಣೆ ವಿಚಕ್ಷಣಾ ದಳದ ಸಿಬ್ಬಂದಿಯೊಂದಿಗೆ ವಾಹನದಲ್ಲಿ ತೆರಳಿ ವಿವಿಧ ಚೆಕ್‌ಪೋಸ್ಟ್‌ಗಳನ್ನು ಪರಿಶೀಲನೆ ನಡೆಸಿದರು.

loading...