ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಶೆಟ್ಟರ್

0
13
loading...

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದಲ್ಲ, ಎರಡಲ್ಲ ಇನ್ನೊಂದು ಕಡೆಯೂ ಸ್ಪರ್ಧೆ ಮಾಡಲಿ. ಅವರು ಚುನಾವಣೆಗೆ ಸ್ಪರ್ಧೆ ಮಾಡುವ ಎಲ್ಲಾ ಕ್ಷೇತ್ರದಲ್ಲಿ ಸೋಲುವುದು ಖಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು. ನಗರದ ಕೇಂದ್ರ ಅಂಚೆ ಕಚೇರಿ ಬಳಿ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಿಎಂ ಸೋಲಿನ ಭೀತಿಯಿಂದಲೇ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ ಸೋಲುವುದು ಗ್ಯಾರಂಟಿ ಎಂದರು.
ಈ ಹಿಂದೆ ಮಾಡಿದ ಸಮೀಕ್ಷೆಗಳು ಯಾವುವು ಸತ್ಯವಾಗಿಲ್ಲ. ಈಗ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯೂ ಹಾಗೆ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಿಪ್ಪೇಸ್ವಾಮಿ ಪಕ್ಷೇತರ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶ್ರೀರಾಮುಲು ಆಶೀರ್ವಾದದಿಂದ ತಿಪ್ಪೇಸ್ವಾಮಿ ಶಾಸಕರಾಗಿದ್ದರು. ಅಲ್ಲಿ ಶ್ರೀರಾಮುಲು ವರ್ಚಸ್ಸು ಹೆಚ್ಚಿದೆ. ಪಕ್ಷದ ನಿರ್ಧಾರಕ್ಕೆ ತಿಪ್ಪೇಸ್ವಾಮಿ ಬದ್ಧರಾಗಿರಬೇಕು. ಒಂದು ಬಾರಿ ಟಿಕೆಟ್ ನಿರ್ಧಾರವಾದ ನಂತರ ಬದಲಾವಣೆಯೇ ಇಲ್ಲ. ತಿಪ್ಪೇಸ್ವಾಮಿ ಪಕ್ಷೇತರಾಗುವುದು ಬಿಡುವುದು ಅವರಿಗೆ ಬಿಟ್ಟದ್ದು ಎಂದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದು ಬಿಡುವುದು ತಿಪ್ಪೇಸ್ವಾಮಿಗೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇಂದಿಲ್ಲಿ ಕಡ್ಡಿಮುರಿದಂತೆ ಹೇಳಿದರು.

ತಮ್ಮನ್ನು ಭೇಟಿಯಾದ ಶ್ರೀರಾಮುಲು ಅವರೇ ಅಂತಿಮ ಅಭ್ಯರ್ಥಿ. ಒಂದು ಬಾರಿ ಟಿಕೆಟ್ ನಿರ್ಧರಿತಗೊಂಡ ನಂತರ ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದರು.
ನಾನು ಖುದ್ದಾಗಿ ಭೇಟಿಯಾಗಿ ಮನವೊಲಿಸಲು ಮುಂದಾಗಿದ್ದೇನೆ. ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ನಮ್ಮ ಪಕ್ಷಕ್ಕೆ ಹೊಡೆತ ಬೀಳುವುದಿಲ್ಲ. ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಸಂಸದ ಪ್ರಹ್ಲಾದ್ ಜೋಶಿ ಮಾತನಾಡಿ, ಎಸ್‍ಸಿ-ಎಸ್‍ಟಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ತೆಗೆದು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಮಾನತೆ ಬರುವವರೆಗೂ ಮೀಸಲಾತಿ ಮುಂದುವರೆಯುತ್ತೆ. ಮಿಸಲಾತಿ ಜಾರಿಗೆ ತಂದಿದ್ದೆ ವಾಜಪೇಯಿ ಸರ್ಕಾರ. ಈಗ ಕಾಂಗ್ರೆಸ್ ಮೀಸಲಾತಿ ಬಗ್ಗೆ ಗೊಂದಲ ಸೃಷ್ಟಿ ಮಾಡಿದೆ. ಇಂತಹ ಗೊಂದಲ ಸೃಷ್ಟಿ ಮಾಡಿದವರ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಇನ್ನೂ ಮುಂದೆಯೂ ನಾವು ದಲಿತರ ಪರವಾಗಿ ನಿಂತು ಹೋರಾಡುತ್ತೇವೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರು ಮೀಸಲಾತಿ ಮುಂದುವರೆಸುತ್ತೇವೆ ಎಂದರು. ಬಿಜೆಪಿ ಟಿಕೆಟ್ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಅಮಿತ್ ಶಾ ಸೂಚನೆ ನೀಡಿದ್ದಾರೆ. ಬಂಡಾಯ ಅಭ್ಯರ್ಥಿಗಳ ಬಗ್ಗೆ ಆಗಲಿ, ಪಕ್ಷದ ಭಿನ್ನಮತ ಬಗ್ಗೆ ಚರ್ಚೆ ನಡೆಸಿಲ್ಲ. ಈ ಬಗ್ಗೆ ಸಂಘ ಪರಿವಾರದವರು ಪ್ರಮುಖರ ಜೊತೆಯೂ ಚರ್ಚೆ ಆಗಿಲ್ಲ. ನಮ್ಮದು ಗೆಲ್ಲುವ ಪಕ್ಷ ಎಂದರು.

loading...