ಬಾರದ ಶುದ್ಧ ಕುಡಿಯುವ ನೀರು: ಜನರ ಪರದಾಟ

0
14
loading...

ಕಲಾದಗಿ: ಸಮೀಪದ ಚಿಕ್ಕಶೆಲ್ಲಿಕೇರಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಕಳಸಕೋಪ್ಪ ಗ್ರಾಮದ ನೀರಿನ ಘಟಕವು ಕಳೆದ 3 ತಿಂಗಳಿಂದ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿದ್ದು ಸಾರ್ವಜನಿಕರು ಶುದ್ಧ ಕುಡಿಯುವ ನೀರು ತರಲು ಐದಾರು ಕಿ.ಮೀ. ದೂರದ ಕಲಾದಗಿ ಹಿರೆಶೆಲ್ಲಿಕೇರಿ ಹಾಗೂ ಚಿಕ್ಕಶೆಲ್ಲಿಕೇರಿ ಗ್ರಾಮಗಳಿಗೆ ಹೋಗಿ ತರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಬಡಜನತೆ ಶುದ್ಧ ಕುಡಿಯುವ ನೀರು ಕುಡಿದು ಆರೋಗ್ಯದಿಂದ ಇರಬೇಕು ಎನ್ನುವ ಮಹತ್ವದ ಉದ್ದೇಶದಿಂದ ಎಲ್ಲ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿದೆ. ಖರ್ಚು ಮಾಡಿ ಸ್ಥಾಪಿಸಿ ನೀರಿನ ಘಟಕವನ್ನು ಸರಿಯಾದ ರೀತಿಯಲ್ಲಿ ಗ್ರಾಮ ಪಂಚಾಯತಿ ನಡೆಸಿಕೊಂಡು ಹೋಗದೆ ಬಂದು ಮಾಡಿದ್ದಾರೆ. ದೇವರು ವರಕೋಟ್ಟರು ಪೂಜಾರಿ ವರಕೋಡದಂತಾಗಿದೆ ಇಲ್ಲಿನ ಜನರ ಪರಿಸ್ಥಿತಿಯಾಗಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕೆಆರ್‌ಐಡಿಎಲ್‌ (ಲ್ಯಾಂಡ ಆರ್ಮಿ) ಇಲಾಖೆಗೆ ಸಂಬಂಧಿಸಿದ್ದು ವರದೆ ಈ ಎಲ್ಲ ಶುದ್ಧ ಕುಡಿಯುವ ನಿರಿನ ಘಟಕಗಳ ಮೇಲುಸ್ತುವಾರಿಯ ಜವಾಬ್ದಾರಿಯಾಗಿರುತ್ತದೆ ದುರಸ್ಥಿಗೊಳಿಸಲು ಅವರಿಗೆ ಹಲವು ಬಾರಿ ಪತ್ರ ಮೂಲಕ ತಿಳಿಸಿದರು ಅವರು ದುರಸ್ಥಿಗೋಳಿಸಲು ಮುಂದಾಗುತ್ತಿಲ್ಲಾ. ನಾವೇನು ಮಾಡೊಣ ಎಂದು ಹಾರಿಕೆ ಉತ್ತರಗಳನ್ನು ನೀಡುತ್ತಾರೆ. ಕೆಆರ್‌ಐಡಿಎಲ್‌ (ಲ್ಯಾಂಡ ಆರ್ಮಿ) ಇಲಾಖೆಗೆ ಸಪಂರ್ಕಿಸಲು ಪ್ರಯತ್ನಿಸಿದರು ಅಧಿಕಾರಿಗಳು ಸಂಪರ್ಕದಲ್ಲಿ ಸಿಗುತ್ತಿಲ್ಲ ಈ ಎರಡು ಇಲಾಖೆಗಳ ಮದ್ಯದಲ್ಲಿ ಈ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರು ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

loading...