ಬಿಜೆಪಿಯವರು ಸುಳ್ಳಿನ ಸರದಾರರು: ಜಿ.ಪರಮೇಶ್ವರ

0
13
loading...

ಕನ್ನಡಮ್ಮ ಸುದ್ದಿ- ಹುಬ್ಬಳ್ಳಿ: ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ ಅವರೊಂದಿಗೆ ಸ್ವಾಗತಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳಿನ ಸರದಾರರು. ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಯಾರೂ ಧೈರ್ಯ ಮಾಡಿರಲಿಲ್ಲ ಎಂದು ಹೇಳಿದರು. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಲಿಂಗಾಯತ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ. ಸಿಎಂ ಸಿದ್ದರಾಮಯ್ಯನವರ ಋಣ ಲಿಂಗಾಯತರ ಸಮಾಜದ ಮೇಲಿದ್ದು, ಲಿಂಗಾಯತರಿಗೆ ನಲ್ವತ್ತು ಕ್ಷೇತ್ರಗಳಲ್ಲಿ ಟಿಕೆಟ್ ಕೊಡಲು ಕಾಂಗ್ರೆಸ್ ಹೈಕಮಾಂಡ್ಗೆ ಕೇಳುತ್ತೇವೆ ಎಂದು ಸಚಿವ ವಿನಯ ಕುಲಕರ್ಣಿ ಸುದ್ದಿಗಾರರಿಗೆ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಧೈರ್ಯಮಾಡಿ ಕೇಂದ್ರಕ್ಕೆ ಶಿಫಾರಸು ಕಳಿಸಿದ್ದಾರೆ. ಮಾದಿಗ ಸಮಾಜ ಸೇರಿದಂತೆ ದಲಿತ ಸಮುದಾಯಗಳು ಹನ್ನೆರಡನೆಯ ಶತಮಾನದಿಂದ ಲಿಂಗಾಯತರ ಜೊತೆಗಿವೆ. ಚುನಾವಣೆಯಲ್ಲಿ ಗೆದ್ದು ನಮ್ಮ ಸಾಮಥ್ರ್ಯ ತೋರಿಸುತ್ತೇವೆ ಎಂದರು. ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ನೀಡಿದ ಜನಪ್ರಿಯ ಯೋಜನೆಗಳ ಆಧಾರದ ಮೇಲೆ ಗೆಲ್ಲುವ ನಿರೀಕ್ಷೆಯಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಬಿಜೆಪಿಯವರು ತಮ್ಮದೆಂದು ಹೇಳಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

loading...