ಬಿಜೆಪಿಯ ಜಯದ ಓಟ ತಡೆಯಲು ಯಾರಿಂದಲು ಸಾಧ್ಯವಿಲ್ಲ: ಉದಾಸಿ

0
13
loading...

ಬ್ಯಾಡಗಿ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ದೇಶದ ಎಲ್ಲ ರಾಜ್ಯಗಳು ಬೆಂಬಲಿಸಿವೆ. ಸುಮಾರು 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು. ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಮತಕ್ಷೇತ್ರದಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ದೇಶ ಹಾಗೂ ರಾಜ್ಯದ ಪ್ರಗತಿಗೆ ಮತದಾರರು ಬದ್ದರಾಗಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಸುಭದ್ರ ದೇಶ ಕಟ್ಟಲು ಬದ್ದವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸ್ವಯಂ ಬಲದಿಂದ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಲೋಕಸಭೆ ವ್ಯಾಪ್ತಿಯಲ್ಲಿ ಕೇಂದ್ರದ ಹಲವು ಯೋಜನೆಗಳನ್ನು ವಿದಾನಸಭೆ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವೆ. ವಿಧಾನಸಭೆ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಾಖಲೆ ಪ್ರಮಾಣದಲ್ಲಿ ಮತಗಳಿಸಲಿದ್ದಾರೆ ಎಂದರು. ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಹಿಂದಿನ ಬಾರಿ ಭಿನ್ನಾಪ್ರಾಯದಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ಐದು ವರ್ಷಗಳ ಕಾಲ ಅಧಿಕಾರವಿಲ್ಲದೆ ಕಾರ್ಯಕರ್ತರು ಮುಖಂಡರು ನೋವು ಅನುಭವಿಸಿದ್ದಾರೆ.

ಈ ಬಾರಿ ಘಟನೆ ಮರುಕಳಿಸದಂತೆ ಒಟ್ಟಾಭಿಪ್ರಾಯದಿಂದ ಚುನಾವಣೆಯ ನಡೆಸುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಪಣತೊಟ್ಟಿದ್ದಾರೆ. ರೈತರ ಸಂಕಷ್ಟ ಹಾಗೂ ಮೂಲಸಮಸ್ಯೆಗಳನ್ನು ಅರಿತು ವಿಧಾನಸಭೆಯಲ್ಲಿ ರೈತಪರ ಧ್ವನಿ ಎತ್ತಲು, ತಾಲೂಕಿನ ಮಣ್ಣಿನ ಮಗನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.ಯಾವುದೇ ಗ್ರಾಮಕ್ಕೂ ಮತದಾನಕ್ಕೆ ತೆರಳಿದರೆ, ಬಿಜೆಪಿ ಬೆಂಬಲಿಸಲು ಬೂತಮಟ್ಟದಲ್ಲಿ ಸಿದ್ದರಾಗಿದ್ದಾರೆ. ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ನಾಮಪತ್ರ ಸಲ್ಲಿಸಲು ತಾಲೂಕಿನ 116 ಗ್ರಾಮಗಳಿಂದ ಹತ್ತಾರು ಸಾವಿರ ಜನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿದ್ದರು.

ಇಲ್ಲಿನ ಬೀರಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಸಿದ್ದೇಶ್ವರ ದೇವಸ್ಥಾನದಿಂದ ಹಿಡಿದು ತಹಸೀಲ್ದಾರ ಕಾರ್ಯಾಲಯದರೆಗೂ ಸಂಸದ ಶಿವಕುಮಾರ ಉದಾಸಿ ಹಾಗೂ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನವರ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು. ವಿಶೇಷವಾಗಿ ಚಕ್ಕಡಿಗಳ ಮೇಲೆ ವಿವಿಧ ಮುಖಂಡರು ಕಾಣಿಸಿಕೊಂಡರು.

ಈ ಸಂದರ್ಭದಲಿ ಜಿ.ಪಂ.ಸದಸ್ಯೆ ಅನಸೂಯಾ ಕುಳೇನೂರು, ಸುಮಂಗಲಾ ಪಟ್ಟಣಶೆಟ್ಟಿ, ್ಲ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ, ಉಪಾಧ್ಯಕ್ಷೆ ಸುಧಾ ಕಳ್ಯಾಳ, ತಾ.ಪಂ.ಸದಸ್ಯ ಯಲ್ಲನಗೌಡ್ರ ಪಾಟೀಲ, ಮುಖಂಡರಾದ ರಾಜೇಂದ್ರಣ್ಣ ಹಾವೇರಣ್ಣನವರ, ಸುರೇಶ ಯತ್ನಳ್ಳಿ, ನಾಗರಾಜ ಬಳ್ಳಾರಿ, ಪ್ರಶಾಂತ ಯಾದವಾಡ, ರೋಹಿಣಿ ಹುಣಸಿಮರದ, ಶಿವಬಸಪ್ಪ ಕುಳೇನೂರು, ವಿಜಯ ಮಾಳಗಿ, ಬಸವರಾಜ ಬಳ್ಳಾರಿ ವೀರಭದ್ರಪ್ಪ ಗೊಡಚಿ, ಜಗದೀಶ ಕಣಗಿಲಬಾವಿ, ಶಿವನಗೌಡ್ರ ಬಸನಗೌಡ್ರ, ಪುರಸಭೆ ಸದಸ್ಯರಾದ ಯಮನೂರಪ್ಪ ಉಜನಿ, ಮಲ್ಲನಗೌಡ್ರ ಭದ್ರಗೌಡ್ರ, ರವೀಂದ್ರ ಪಟ್ಟಣಶೆಟ್ಟಿ, ಸುರೇಶ ಆಸಾದಿ, ನಾಗರಾಜ ಹಾವನೂರು, ಕೆಂಪೆಗೌಡ್ರ ಪಾಟೀಲ ಇತರಿದ್ದರು.

loading...