ಬಿಜೆಪಿ ಅಧಿಕಾರಕ್ಕೆ ಬಂದರೇ ನೀರಾವರಿಗೆ ಆದ್ಯತೆ: ಬಿಎಸ್‌ವೈ

0
17
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಭತ್ತದ ಬೆಳೆಗಳಿಗೆ ನೀರಿಲ್ಲದೇ ಸಾವಿರಾರು ಹೇಕ್ಟರ್‌ ನಾಶವಾದ ಭತ್ತದ ಗದ್ದೆಗಳಿಗೆ ಖುದ್ದು ಭೇಟಿ ನೀಡಿದ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತರೊಂದಿಗೆ ಸಂವಾದ ನಡೆಸುವ ಮೂಲಕ ರೈತರ ಸಮಸ್ಯೆಗಳನ್ನು ಆಲಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರು, ಮತ್ತು ನೀರಾವರಿಗಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಭರವಸೆಗಳನ್ನು ನೀಡಿದ್ದಾರೆ.
ಜಿಲ್ಲೆಯ ಗಂಗಾವತಿ ನಗರದಲ್ಲಿ ಮಂಗಳವಾರ ಭತ್ತದ ಬೆಳೆಗಾರರೊಂದಿಗೆ ಸಂವಾದ ನಡೆಸಲು ಆಗಮಿಸಿದ ಅವರು ವಿದ್ಯಾನಗರ ಬಳಿ ಬೆಳೆಗೆ ನೀರು ಇಲ್ಲದೇ ಭತ್ತದ ಬೆಳೆ ನಾಶಹೊಂದಿದ್ದನ್ನು ಖುದ್ದುಂ ವಿಕ್ಷಣೆಯನ್ನು ಮಾಡಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಳೆಗೆ ನೀರಿಲ್ಲದೆ ಸಾವಿರಾರು ಹೆಕ್ಟೇರ್‌ ಭತ್ತದ ಬೆಳೆ ನಾಶವಾಗಿದೆ. ರೈತರಿಗೆ ಸುಮಾರು 500 ಕೋಟಿಯಷ್ಟು ನಷ್ಟವಾಗಿದೆ. ರಾಜ್ಯದಲ್ಲಿ ಸರ್ಕಾರ ಎಲ್ಲಿದೆ, ಸತ್ತು ಹೋಗಿದೆ, ಬದುಕಿದ್ರೆ ಈ ಸ್ಥಿತಿ ಬರ್ತಿರಲಿಲ್ಲ ಅಂತಾ ರಾಜ್ಯ ಸರ್ಕಾರದ ವಿರುದ್ಧ ಬಿಎಸ್ವೈ ವಾಗ್ದಾಳಿ ನಡೆಸಿದ್ರು. ಸರ್ಕಾರ ಸತ್ತು ಹೋದ್ರೆ ಅಧಿಕಾರಿಗಳು ಕೂಡ ಸತ್ತಿದ್ದಾರೇನು ಅಂತಾ ಪ್ರಶ್ನೆ ಮಾಡಿದ್ರು.
ರಾಜ್ಯದಲ್ಲಿ ಅನ್ನದಾತರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ÷್ಯ ಮಾಡಿದೆ. ಸರಿಯಾಗಿ ಕ್ರಮಬದ್ಧವಾಗಿ ಯೋಚಿಸಿದ್ರೆ ರೈತರಿಗೆ ಈ ಸ್ಥಿತಿ ಬರ್ತಿರಲಿಲ್ಲ. ನೀರಾವರಿ ಬಗ್ಗೆ ರಾಜ್ಯ ಸರ್ಕಾರ ಸೂಕ್ತವಾಗಿ ಗಮನ ವಹಿಸಬೇಕಾಗಿತ್ತು ಅಂತಾ ಹೇಳಿದ್ರು. ಇದೇ ವೇಳೆ 2 ವರ್ಷಗಳಿಂದ ಈ ಸಮಸ್ಯೆ ಇದ್ದು ಆಗ ಬರದವರು ಈಗೇಕೆ ಬಂದಿದ್ದು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾದ ಬಿಎಸ್ವೈ ನಿಮ್ಮನ್ನ ಕೇಳಿ ಬರಬೇಕೇನ್ರಿ, ರೈತರ ಸಮಸ್ಯೆಗಳನ್ನ ಕೇಳಲಿಕ್ಕೆ ನಾನು ಬಂದಿದ್ದೇನೆ, ಇದು ಚುನಾವಣಾ ಗಿಮಿಕ್‌ ಅಲ್ಲ ಅಂತ ಸಮಜಾಯಿಷಿ ನೀಡಿದ್ರು. ಕಳೆದ ಒಂದು ವರ್ಷದಿಂದ ಚುನಾವಣೆಯ ಗುಂಗಿನಲ್ಲಿರುವ ರಾಜ್ಯ ಸರ್ಕಾರದಿಂದ ನಾವು ಏನೂ ನಿರೀಕ್ಷಿಸಲು ಸಾಧ್ಯವಿದೆ, ಎಡದಂಡೆ ಕಾಲುವೆಗೆ ಸಕಾಲಕ್ಕೆ ನೀರು ಬಿಡದೆ ಇರುವದರಿಂದ, ಮತ್ತು ನೀರು ನಿರ್ವಹಣೆ ಸರಿಯಾಗಿ ಮಾಡದ್ದರಿಂದ ಇಂದು ಭತ್ತ ಬೆಳೆದ ರೈತ ಸಂಕಷ್ಟಕ್ಕೆ ಒಳಗಾಗಿ, ಬೆಳೆನಾಶವಾಗಿದೆ ಎಂದು ಹೇಳಿದ ಅವರು ಆದರೆ ಬೆಳೆಗೆ ನೀರು ಬಿಡಲಿಲ್ಲ ಹಾಗೂ ನಷ್ಟಕ್ಕೆ ಪರಿಹಾರ ಯಾಕೇ ನೀಡಿಲ್ಲ ಇದೊಂದು ರೈತವಿರೋಧಿ ಸರ್ಕಾರವಾಗಿದೆ ಎಂದು ಕಿಡಿಕಾರಿದರು.

loading...