ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ: ಸುನೀಲ ಹೆಗಡೆ

0
20
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ರಾಜ್ಯದಲ್ಲಿ ಈ ಭಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿಯೂ ಪಕ್ಷ ಸದೃಢಗೊಂಡಿದ್ದು, ನಿರಾಯಸವಾಗಿ ಪಕ್ಷ ಇಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಸಚಿವ ದೇಶಪಾಂಡೆಯವರು ಜನರ ಭಾವನೆ ಮತ್ತು ವಿಚಾರಗಳನ್ನು ಬಳಸಿ ರಾಜಕೀಯ ಜೀವನ ಮಾಡುತ್ತಿದ್ದಾರೆ.ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿರುವ ದೇಶಪಾಂಡೆಯವರಿಗೆ ಅವರ ಬುಡದಲ್ಲಿರುವ ಶ್ರೇಯಸ್ ಪೇಪರ್ ಮಿಲ್ ಕಾರ್ಮಿಕರಿಗೆ ಸಂಬಳ ಕೊಡದೆ ಒದ್ದಾಡುತ್ತಿರುವುದು ಇನ್ನೂ ಗಮನಕ್ಕೆ ಬಾರದಿರುವುದು ವಿಪರ್ಯಾಸ ಎಂದು ಗುಡುಗಿದ ಸುನೀಲ ಹೆಗಡೆಯವರು ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿಯವರು ಮಾತನಾಡಿ ಆಶ್ರಯ ಮನೆ ಫಲಾನುಭವಿಗಳ ಯಾದಿ ಸಿದ್ದಪಡಿಸುವಾಗ ಸ್ವಜನಪಕ್ಷಪಾತ ನಡೆಸಲಾಗಿದೆ ಎಂದು ಕಿಡಿ ಕಾರಿದರು. ಈ ಸಂದರ್ಭದಲ್ಲಿ ಪಕ್ಷದ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ಜೊಯಿಡಾ ಘಟಕದ ಅಧ್ಯಕ್ಷ ತುಕರಾಮ ಮಾಂಜ್ರೇಕರ, ಪಕ್ಷದ ಜಿಲ್ಲಾ ಮುಖಂಡರುಗಳಾದ ಅಶೋಕ ಪಾಟೀಲ, ರೋಶನ್ ನೇತ್ರಾವಳಿ, ಸುಧಾಕರ ರೆಡ್ಡಿ, ರಫೀಕ್ ಹುದ್ದಾರ, ಅಬ್ದುಲ್ ವಹಾಬ ಬಾನ್ಸಾರಿ, ನಗರ ಸಭಾ ಸದಸ್ಯರುಗಳಾದ ರವಿ ಸುತಾರ್, ಮುಸ್ತಾಕ ಶೇಖ, ಪಕ್ಷದ ಮುಖಂಡರುಗಳಾದ ನರೇಂದ್ರ ಚವ್ಹಾಣ್, ಚಂದ್ರಕಾಂತ ಕ್ಷೀರಸಾಗರ, ಮಂಜುನಾಥ ಪಾಟೀಲ, ಟಿ.ಎಸ್.ಬಾಲಮಣಿ, ಗುರು ಮಠಪತಿ, ದಶರಥ ಬಂಡಿವಡ್ಡರ, ಎಂ.ಎಸ್.ನಾಯ್ಕ, ವಿಷ್ಣು ವಾಜ್ವೆ, ಅನಂತ್ರಾಜ ನಾಯ್ಕ, ಬಲವಂತ ಪಾಟೀಲ, ರಿಯಾಜ ಖಾನ್, ಬುದ್ದಿವಂತ ಪಾಟೀಲ ಸ್ಮೀತಾ, ಮಾರುತಿ ಡೊಂಬರ, ದೇವಕ್ಕ ಕೆರೆಮನೆ, ರಮಾ, ರಾಜಶೇಖರ ಬೆಳ್ಳಿಗಟ್ಟಿ, ಸಾವಿತ್ರಿ ಬಾಯಿ ರಾಯಭಾಗಿ ಮೊದಲಾದವರು ಉಪಸ್ಥಿತರಿದ್ದರು.

loading...