ಬಿಜೆಪಿ ಅಭ್ಯರ್ಥಿ ಪಾಟೀಲ ಮತಯಾಚನೆ

0
16
loading...

ನರಗುಂದ: ನರಗುಂದ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಲಕ್ಕುಂಡಿ ಮಂಡಲದ ಅಡವಿಸೋಮಾಪೂರ, ಅಡವಿಸೋಮಾಪೂರ ತಾಂಡಾಗಳಲ್ಲಿ ಮತ್ತು ಹುಯಿಲಗೋಳ, ಹಿರೇಕೊಪ್ಪ ಮತ್ತು ಚಿಕ್ಕೊಪ್ಪ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಸಿ.ಸಿ. ಪಾಟೀಲ ಅವರ ಪುತ್ರ ಉಮೇಶಗೌಡ ಪಾಟೀಲ ಹಾಗೂ ನೇಹಾ ಪಾಟೀಲ ರವಿವಾರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅಡವಿಸೋಮಾಪೂರ ಗ್ರಾಮದ ಮಹಿಳೆಯರು ಆರತಿ ಬೆಳಗುವುದರ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅರುಣ ಅಣ್ಣಿಗೇರಿ, ರಾಮಣ್ಣಗೌಡ್ರ, ರಾಮಣ್ಣ ಹೊಸಳ್ಳಿ, ಶಿವಪ್ಪ ದೊಡಮನಿ, ಮಂಜುನಾಥ ಜಡಿ, ಕೊಟ್ರೇಶ ಮೆಣಶಿನಕಾಯಿ, ವಿಜಯ ಬೇಲೇರಿ, ಗಿರೀಶ ದೊಡಮನಿ, ಜಾವಿದ ಮಿಶ್ರೀಕೋಟೆ, ರಮೇಶ ಗಡಾದ, ಹೇಮಂತ ದೊಡ್ಡಮನಿ, ಸಂತೋಷ ತಳವಾರ, ಮಲ್ಲಪ್ಪ ಹೊಸಳ್ಳಿ, ಗುರುಶಾಂತ ದೊಡ್ಡಮನಿ ಗಿರೀಶ ಜೋಶಿ ಮತ್ತು ಮಹಿಳಾ ಮೋರ್ಚಾ ಕಾರ್ಯಕರ್ತೆಯರಾದ ಸುಕನ್ಯಾ ಸಾಲಿ, ನಿರ್ಮಲಾ ಪಾಟೀಲ, ಲತಾ ಪಾಟೀಲ, ರೇಖಾ ಪಾಟೀಲ, ಬಿ.ಆರ್‌. ಹಿರೇಗೌಡ್ರ, ಪಾಲಾಕ್ಷಗೌಡ್ರ, ಮಂಜು ಬನ್ನಿಮರದ ಅನೇಕರು ಉಪಸ್ಥಿತರಿದ್ದರು.

loading...