ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ಮನೆ ಮನೆ ಭೇಟಿ

0
29
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಭಟ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ ನಿನ್ನೆ ಶಿರಾಲಿಯಲ್ಲಿ ಮನೆ ಮನೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸಿದರು.

ಮನೆ ಭೇಟಿ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ದಿ ಕಾರ್ಯಗಳು ಈ ಬಾರಿ ಬಿಜೆಪಿಗೆ ಮತವಾಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದರು. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣವಿದ್ದು ನನ್ನ ಗೆಲವು ಖಚಿತ ಎಮಧು ತಿಳಿಸಿದರು. ಕೇಂದ್ರ ಸಚಿವ ಅನಂತಕುಮಾರ ಹೆಗ್ಗಡೆಯವರ ಜನಪರ ಕಾಳಜಿ ಹಾಗೂ ಹಿಂಧುತ್ವದ ನಿಲುವನ್ನು ಪ್ರತಿ ಮನೆ ಮನೆಗೆ ತಲುಪಿಸಿ ಕ್ಷೇತ್ರದಲ್ಲಿ ಪಕ್ಷ ಅತೀ ಹೆಚ್ಚು ಮತ ಗಳಿಸುವಂತೆ ಕಾರ್ಯಕರ್ತರು ಶ್ರಮೀಸಬೇಕು ಎಂದು ತಿಳಿಸಿದರು.
ಭಟ್ಕಳ ಬಿಜೆಪಿ ಘಟಕದ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ತಾಪಂ ಸದಸ್ಯೆ ಮಾಲತಿ ದೇವಾಡಿಗ, ಮುಖಂಡರಾದ ಕೃಷ್ಣ ನಾಯ್ಕ, ಮೋಹನ ದೇವಾಡಿಗ, ಭಾಸ್ಕರ ಮೊಗೇರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...