ಬಿಜೆಪಿ ಟಿಕೆಟ್ ಆಯ್ಕೆಯಲ್ಲಿ ಹಿಂದುಪರ ಹೋರಾಟಗಾರರ ನಿರ್ಲಕ್ಷ: ಭುಗಿಲೆದ್ದ ಅಸಮಾಧಾನ

0
11
loading...

ಕನ್ನಡಮ್ಮ ಸುದ್ದಿ-ಕಾರವಾರ: ಕಳೆದ ಆರು ತಿಂಗಳುಗಳಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ನಡೆದಂತ ಘಟನೆಗಳಿಂದ ಹಿಂದುತ್ವದ ಅಲೆಯ ಮೇಲೆ ಗೆಲುವಿನ ಕನಸನ್ನು ಕಾಣುತ್ತಿದ್ದ ಬಿಜೆಪಿಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪಕ್ಷದೊಳಗಿನ ಭಿನ್ನಮ್ಮತ ಭುಗಿಲೆಳುವಂತೆ ಮಾಡಿದೆ.

ಹೊನ್ನಾವರದಲ್ಲಿ ಪರೇಶ ಮೇಸ್ತಾನ ಸಾವಿನ ನಂತರ ನಡೆದ ಕೋಮುಘರ್ಷಣೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಹರಡಿ ಹಿಂದುತ್ವದ ಅಲೆ ಬಿಜೆಪಿಯಲ್ಲಿ ಗೆಲುವಿನ ವಿಶ್ವಾಸ ಹುಟ್ಟಿಸಿದಂತು ಸುಳ್ಳಲ್ಲ. ಆದರೆ ಬಿಜೆಪಿ ಈ ಎಲ್ಲಾ ಹೋರಾಟಗಳಲ್ಲಿ ಮಂಚೂಣಿಯಲ್ಲಿದ್ದಂಥ ಬಹುತೇಕ ತನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಿ ಬೇರೆ ಪಕ್ಷದಿಂದ ಬಂದಂಥ ‘ಜಾತ್ಯಾತೀತ’ ಮುಖಗಳಿಗೆ ಮಣೆ ಹಾಕಿದೆ. ಇದು ಜಿಲ್ಲೆಯಲ್ಲಿ ಹಿಂದುತ್ವದ ಹೋರಾಟಗಳಲ್ಲಿ ಮಂಚೂಣಿಯಲ್ಲಿದ್ದ ಟಿಕೇಟ್ ಆಕಾಂಕ್ಷಿಗಳ ಸಿಟ್ಟಿಗೂ ಕಾರಣವಾಗಿದೆ. ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿ ಸೋತವರು. ಕಳೆದ ಎರಡು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾದ ಹಳಿಯಾಳದ ಸುನೀಲ ಹೆಗಡೆ ಜೆಡಿಎಸ್‍ನಿಂದ ಬಂದವರು. ಇನ್ನು ಕಾರವಾರದ ರೂಪಾಲಿ ನಾಯ್ಕ ಕಳೆದ ಒಂದು ವರ್ಷದ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡವರು. ಕಾರವಾರ ಟಿಕೇಟ್ ಘೋಷಣೆಯಾದ ನಂತರ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಹಿಂದುಳಿದ ಮೋರ್ಚಾದ ಪ್ರಮುಖ ರಾಮು ರಾಯ್ಕರ ಹಿಂದುತ್ವಕ್ಕಾಗಿ ಹೋರಾಟ ಮಾಡಿ ಜೈಲ್‍ಗೆ ಹೋಗುವವರು ಒಬ್ಬರು. ಅಧಿಕಾರ ಅನುಭವಿಸುವವರು ಇನ್ನೊಬ್ಬರು ಎಂದು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಒಟ್ಟಾರೆ ಈ ಟಿಕೇಟ್ ವಂಚಿತರ ಕ್ರೋದಾಗ್ನಿಯು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆಗೆ ಯಾವ ರೀತಿ ತಟ್ಟಲಿದೆ ಎಂಬುದು ಕಾದು ನೋಡಬೇಕಿದೆ.

loading...