ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

0
26
loading...

ರಬಕವಿ-ಬನಹಟ್ಟಿ: ಕಾಂಗ್ರೆಸ್‍ನ ಆಡಳಿತದ ವೈಕರಿಯನ್ನು ಮೆಚ್ಚಿ ನೂರಾರೂ ಬಿಜೆಪಿ ಮಹಿಳಾ ಮತ್ತು ಪುರುಷ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಸಚಿವೆ ಉಮಾಶ್ರೀ ಹೇಳಿದರು.
ಸಮೀಪದ ಹೊಸೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕ್ಷೇತ್ರದ ಸರ್ವಾಂಗೀಣ ಅಭಿವೃಧಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಕ್ಷೇತ್ರದಲ್ಲಿ ಆಗಲಾರದ ಕೆಲಸಗಳನ್ನು ಮಾಡಿಸಿದ್ದೇವೆ ಎಂದರು.

ಸದಾಸಿವ ಜಿಡ್ಡಿಮನಿ, ಹಣಮಂತ ಜಿಡ್ಡಿಮನಿ, ಮೋಹನ ಬಸಣ್ಣವರ, ಚನಬಸಪ್ಪ ರಾವಳ, ಕಲ್ಲಪ್ಪ ಮುಧೋಳ, ಮಹಾದೇವಿ ಬೀಳಗಿ ದುಂಡವ್ವ ಪೂಜಾರಿ, ಮಹಾದೇವಿ ಹಳ್ಳೂರ ಸೇರಿದಂತೆ 50ಕ್ಕೂ ಹೆಚ್ಚು ಜನ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಸತ್ಯಪ್ಪ ಮಗದುಮ, ಶ್ರೀಶೈಲ ಮೇಣಿ. ಪರಶುರಾಮ ಪಾಟೀಲ, ಗೋವಿಂದ ನಿಂಗಸಾನಿ, ಬಸವರಾಜ ಶಿರೋಳ, ಚಿಕ್ಕಪ್ಪ ಉಂಕಿ, ಶ್ರೀಕಾಂತ, ರಾಜು, ಉಸ್ಮಾನ, ಮುತ್ತು ತೇಲಿ ಸೇರಿದಂತೆ ಅನೇಕರು ಇದ್ದರು.

loading...