ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

0
15
loading...

ಜಮಖಂಡಿ : ಶಾಸಕ ಸಿದ್ದು ನ್ಯಾಮಗೌಡರು ಜಮಖಂಡಿ ವಿಧಾನಸಭಾ ಮತಕ್ಷೇತ್ರದ 2018ರ ವಿಧಾನಸಭಾ ಚುನಾವಣೆ ಪ್ರಯುಕ್ತ ಗುರವಾರ ಕಾಂಗ್ರೆಸ್ ಪಕ್ಷದ ಪ್ರಚಾರಾರ್ಥವಾಗಿ ಕ್ಷೇತ್ರದ ಆಲಬಾಳ, ಮೈಗೂರ, ಮುತ್ತೂರ ಮತ್ತು ಕಂಕಣವಾಡಿ ಗ್ರಾಮಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ತಮ್ಮ ಅವಧಿಯ ಕಳೆದ ಐದು ವರ್ಷಗಳಲ್ಲಿನ ಸಾಧನೆಗಳಾದ, ರೈತರಿಗೆ ಕೊಳವೆ ಬಾವಿ, ಪೈಪ್‍ಲೈನ್, ವಿವಿಧ ಸಮುದಾಯ ಭವನಗಳಿಗೆ ನೀಡಿದ ಅನುದಾನ, ಶಾಲೆ/ಕಾಲೇಜು, ರಸ್ತೆ, ಕುಡಿಯುವ ನೀರು ಸೇರಿದಂತೆ ತಾವು ಕೈಗೊಂಡ ಗ್ರಾಮಾಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಬಂದಾಗ ಸದರಿ ಗ್ರಾಮಗಳಲ್ಲೆಲ್ಲ ವ್ಯಾಪಕವಾಗಿ ಬೆಂಬಲ ವ್ಯಕ್ತವಾಯಿತು ಎಂದು ವರದಿಯಾಗಿದೆ.

ಶಾಸಕರು ಕಳೆದ ಐದು ವರ್ಷಗಳಲ್ಲಿ ಮಾಡಿದ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ ಕಂಕಣವಾಡಿ ಗ್ರಾಮದ ಶ್ರೀಶೈಲ್ ಮಾಂಗ, ರಾಯಪ್ಪ ಮಾಂಗ, ಪರಸಪ್ಪ ಮಾಂಗ, ಅಲ್ಲಪ್ಪ ಮಾಂಗ, ರಾಮಪ್ಪ ಮಾಂಗ, ಬಸಪ್ಪ ಗೋಠೆ, ಪರಸಪ್ಪ ಶಿರೋಳ, ಮುರೆಪ್ಪ ಬೆಳಗಲಿ, ದೀಪಕ ಮಸೂಳಿ ಮತ್ತು ಅಲ್ಲದೇ ಅಲಬಾಳ ಗ್ರಾಮದಲ್ಲಿ ಕರೆಪ್ಪ ಈರಪ್ಪ ಬಿರಾದಾರ, ಸಿದಗೊಂಡ ಗಸ್ತಿ, ಮಹಾದೇವ ರಾವತಪ್ಪ ಚಿನಗುಂಡಿ, ಸತ್ಯಪ್ಪ ಹನಮಂತ ಕುಳಲಿ, ಆಮಸಿದ್ದ ಶಿವಪ್ಪ ಚಿನಗುಂಡಿ, ಶ್ರೀಧರ ಮಲ್ಲಪ್ಪ ಚಿನಗುಂಡಿ, ಪರಮಾನಂದ ಮುತ್ತಪ್ಪ ಕುಳಲಿ, ಆಮಸಿದ್ದ ಬಸಪ್ಪ ಚಿನಗುಂಡಿ, ಪುಟ್ಟಯ್ಯ ಸದಾಶಿವಯ್ಯ ಭಂಗಿಮಠ, ಮಲ್ಲಪ್ಪ ಸಿದಗೊಂಡ ಬಿರಾದಾರ ಮತ್ತು ಲಕ್ಷ್ಮಣ ಅನ್ನಪ್ಪ ತಳವಾರ ಇವರುಗಳೆಲ್ಲ ತಮ್ಮ ಬಳಗದವರೊಂದಿಗೆ ಬಿಜೆಪಿ ಪಕ್ಷವನ್ನು ತೊರೆದು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

loading...