ಬಿಜೆಪಿ ವಿರುದ್ಧ ಹೆಬ್ಬಾರ ವಾಕಪ್ರಹಾರ

0
13
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಒಬ್ಬರು ಕ್ರಿಕೆಟ್ ನಲ್ಲಿ ಇನ್ನೊಬ್ಬರು ಬ್ಯಾಂಕ್ ನಲ್ಲಿ ಮತ್ತೊಬ್ಬರು ನೋಟ್ ಬ್ಯಾನ್ ಮಾಡಿ ಮನೆಯಲ್ಲಿದ್ದ ಹಣ ಬಿಡಲಿಲ್ಲ ಹೀಗೆ ಮೂರು ಜನ ಮೋದಿಗಳು ಸೇರಿ ದೇಶವನ್ನು ಕರಾಳ ಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಕಾತೂರ, ಹನುಮಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಉದ್ಯಮಿಗಳ ಸಾಲ ಮನ್ನಾ ಮಾಡುವ ಬಿಜೆಪಿಯವರಿಗೆ ದೇಶಕ್ಕೆ ಅನ್ನ ನೀಡುವ ಅನ್ನದಾತನ ಸಾಲ ಮನ್ನಾ ಮಾಡುವುದಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ರಾಜ್ಯ ಕಾಂಗ್ರೇಸ ಸರ್ಕಾರ ಸಾವಿರಾರು ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ. ಬಿಜೆಪಿಯವರು 1 ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. ಆರೋಗ್ಯಕ್ಕಾಗಿ ಒಳ್ಳೆಯ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್‍ದಾರರು ಲಾಭ ಪಡೆದುಕೊಳ್ಳಬಹುದು. 2008 ರ ಚುನಾವಣೆಯ ಸೋಲು ನಮಗೆ ಪಾಠ ಕಲಿಸಿದೆ ಎಂದರು. ಬಿಜೆಪಿ ಯ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ, ಹಾಗೂ 25 ಕೇಂದ್ರ ಮಂತ್ರಿಗಳು ಹಾಗೂ 65 ಸಂಸದರು ಸೇರಿದಂತೆ ಒಂದು ತಿಂಗಳಿನಿಂದ 100 ಜನರ ಟೀಮ್ ರಚನೆ ಮಾಡಿಕೊಂಡರೂ ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯಾಧ್ಯಕ್ಷ ಬಿ.ಎಸ್ ಯಡ್ಯೂರಪ್ಪ ಇಲ್ಲಿಯ ತನಕ ಮಿಶನ್ 150 ಅಂತಾ ಹೇಳುತ್ತಿದ್ದರು ಸಿದ್ದರಾಮಯ್ಯರ ವರ್ಚಸ್ಸಿಗೆ ಇದು ಸಾಧ್ಯವಿಲ್ಲ ಎಂದು ಅರಿತು 130 ಕ್ಕೆ ಬಂದಿದ್ದಾರೆ. ಇನ್ನೂ ಕೆಲ ದಿನಗಳು ಹೋದರೆ 30ಕ್ಕೂ ಬಂದರು ಆಶ್ಚರ್ಯಪಡಬೇಕಾಗಿಲ್ಲ. ಪ್ರಧಾನಿ ಮೋದಿಯವರು ಶತಾಯಗತಾಯ ಬಿಜೆಪಿಯನ್ನೇ ಗೆಲ್ಲಿಸಬೇಕೆಂದು ಹಠತೋಟ್ಟಂತೆ ಕಾಣುತ್ತಿದೆ ಆದ್ದರಿಂದ ಪ್ರಧಾನಿ ಮೋದಿಯವರು 35 ಸಭೆಗಳನ್ನು ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ ನಾವು ಗೆದ್ದರೆ ದೇಶದಲ್ಲಿಯೇ ಗೆದ್ದಂತೆ ಆದ್ದರಿಂದ ನಾವೇಲ್ಲರೂ ಒಟ್ಟಾಗಿ ದುಡಿಯಬೇಕು ಎಂದರು. ಶಾಸಕರ ಪುತ್ರ ವಿವೇಕ ಹೆಬ್ಬಾರ, ಜಿ.ಪಂ ಸದಸ್ಯ ರವಿಗೌಡ ಪಾಟೀಲ, ಮಾಜಿ ಜಿ.ಪಂ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಕೃಷ್ಣಾ ಹಿರೇಹಳ್ಳಿ, ವಿ.ಎಸ್.ನಾಯ್ಕ ರಾಮಣ್ಣ ಪಾಲೇಕರ, ರಾಮಣ್ಣ ಕುನ್ನೂರ, ಸಿದ್ದಪ್ಪ ಹಡಪದ, ಗಿಡ್ಡಪ್ಪ ಹಿರೇಹಳ್ಳಿ, ಫಕ್ಕೀರಸ್ವಾಮಿ ಗುಲ್ಯಾನವರ, ಜ್ಞಾನದೇವ ಗುಡಿಯಾಳ ಸೇರಿದಂತೆ ಮುಂತಾದ ಕಾಂಗ್ರೆಸ್ ಧುರೀಣರು ಇದ್ದರು.

loading...