ಬಿರುಗಾಳಿ ಮಳೆಗೆ ಗೃಹಪ್ರವೇಶದಂಚಿನಲ್ಲಿದ್ದ ಮನೆ ಮೇಲ್ಛಾವಣಿ ನಾಶ

0
23
loading...

ಪಾಲಬಾವಿ 19: ಗ್ರಾಮದಲ್ಲಿ ಬುಧವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಗಿಡಮರ ನೆಲಕ್ಕುರುಳಿವೆ. ಭಾರಿ ಪ್ರಮಾಣದಲ್ಲಿ ಗ್ರಾಮದ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ. ಗ್ರಾಮದ ನಿವಾಸಿ ಸುಶೀಲಾ ಮಹಾದೇವ ಕರೋಶಿ ಇವರಿಗೆ ಸೇರಿದ ಬಸವ ವಸತಿ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಮನೆಯ ಕಟ್ಟಡವು ಮೆಲ್ಚಾವಣಿ ಪತ್ರಾಸ್ ಬಾರಿ ಬಿರುಗಾಳಿಗೆ ಹಾರಿಹೋಗಿ ಅಪಾರ ಹಾನಿ ಸಂವಿಸಿದೆ. 12 ಪತ್ರಾಸ್, 8 ಕಬ್ಬಿಣ ಪೈಪ್ ಅಂದಾಜು 70ಸಾವಿರ ಹಾನಿಯಾಗಿದೆಂದು ತಿಳಿದು ಬಂದಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬತ್ತೆ ಇನ್ನೇನು ಮನೆಯ ಗೃಹ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ವಿಧಿಯಾಟವೇ ಬೇರೆಯಾಗಿತ್ತು ಎಂದು ಮಹಾದೇವ ಕರೋಶಿ ಕಣ್ಣಿರು ಹಾಕಿದರು. ಈ ದುರ್ಘಟನೆ ನಡೆದದ್ದು ತಿಳಿದಿದ್ದರು. ಚುನಾಯಿತ ಗ್ರಾ.ಪಂ.ಸದಸ್ಯರಾಗಲಿ, ಗ್ರಾಮ ಲೆಕ್ಕಾಧಿಕಾರಿಯಾಗಲಿ ಬಂದು ನೋಡಿಲ್ಲವೆಂದು ಮಹಾದೇವ ಕರೋಶಿ ಆಕ್ರೋಶವ್ಯಕ್ತಪಡಿಸಿದರು.

loading...