ಬಿ.ಜೆಪಿ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ

0
17
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ರಾಜ್ಯದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರೂ ಕೂಡ ಯಲ್ಲಾಪುರ-ಮುಂಡಗೋಡ ತಾಲೂಕು ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿವನ್ನೋಳಗೊಂಡ ಕೇತ್ರದ ಬಿ.ಜೆಪಿ ಅಭ್ಯರ್ಥಿಯ ಘೋಷಣೆಯಾಗದಿರುವದರಿಂದ ಬಿ.ಜೆಪಿ ಪಾಳಯದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದ್ದು ತಾವು ಅಭ್ರ್ಯರ್ಥಿಯಾಗಬಹುದು ಎಂಬ ಆಶಾಕಿರಣ ಉಳಿದುಕೊಂಡಿದೆ.
ಈಗಾಗಲೇ ಕಾಂಗ್ರೇಸನಿಂದ ಶಿವರಾಮ ಹೆಬ್ಬಾರ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಜೆಡಿಎಸ್ ನಿಂದ ರವೀಂದ್ರ ನಾಯ್ಕಗೆ ಟಿಕೆಟ್ ಘೋಷಣೆಆಗಿದೆ. ಆದರೆ ಅವೆರಡು ಪಕ್ಷಗಳು ಮಹಿಳೆಯರಿಗೆ ಮಣೆ ಹಾಕದೇ ಇರುವದು ಮಹಿಳಾ ಮತದಾರರಲ್ಲಿ ಅಸಮಾಧಾನ ಹೆಚ್ಚಿಸಿದೆ ಹಾಗೂ ಬಿಜೆಪಿ ಪಕ್ಷದಿಂದಾದರೂ ಮಹಿಳೆಗೆ ಆದ್ಯತೆ ನೀಡಿ ಟಿಕೆಟ್ ನೀಡಲಿ ಎಂಬ ಮಾತು ಮಹಿಳಾ ವಲಯದಲ್ಲಿ ಕೇಳಿ ಬರುತ್ತದೆ. ಅದಕ್ಕೆ ಇಂಬು ಕೊಡುವಂತೆ ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರೀಯರಾಗಿರುವ ಹಾಗೂ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆಯಾಗಿರುವ ರೇಖಾ ಹೆಗಡೆ ಹಾಗೂ ಮುಂಡಗೋಡದ ಸುಮನಾ ಕುಲಕರ್ಣಿ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದು ಅದಕ್ಕಾಗಿ ಹಿರಿಯ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯಲ್ಲಿ ವಿ.ಎಸ್ ಪಾಟೀಲ, ನರಸಿಂಹ ಕೋಣೆಮನೆ, ಗಣಪತಿ ಮುದ್ದೆಪಾಲ,ಎಲ್ ಟಿ ಪಾಟೀಲ, ಪ್ರಮೋದ ಹೆಗಡೆ ಇನ್ನು ಹಲವರು ಆಕಾಂಕ್ಷಿಗಳಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವದನ್ನೇ ಜಾತಕಪಕ್ಷಿಗಳಂತೆ ಎದುರು ನೋಡುತಿದ್ದರೆ ಇತ್ತ ಮಹಿಲೆಯರಿಗೆ ಪ್ರಾತಿನಿಧ್ಯ ನೀಡಿ ತಮಗೂ ಪಕ್ಷದ ಟಿಕೆಟ ನೀಡಬಹುದೆಂಬ ಆಶಾಕಿರಣ ಮಹಿಳಾ ವಲಯದಲ್ಲಿ ಇದೆ. ಪುರುಷ ಅಭ್ಯರ್ಥಿಗಳ ನಡುವೆ ಪೈಪೋಟಿ ಹೆಚ್ಚಿರುವದರಿಂದ ಯಾರಿಗೆ ಟಿಕೆಟ್ ನೀಡಿದರೂ ಅಸಮಧಾನ ಕಂಡು ಬರುವ ಸಾಧ್ಯತೆಯಿದೆ. ಆದ್ದರಿಂದ ಮಹಿಳೆಗೆ ಟಿಕೆಟ್ ನೀಡಿ ಇಂತಹ ಸಂಧಿಗ್ಧತೆಯಿಂದ ಪಾರಾಗಬಹುದು ಎಂಬ ಅಂಶ ಮೊನ್ನೇ ನಡೆದ ಯುವ ಮೋರ್ಚಾ ಸಮಾವೇಶಕ್ಕೆ ಬಂದಿದ್ದ ಮಹಿಳಾ ಪ್ರಮುಖರಲ್ಲಿ ಚರ್ಚಿತವಾಗುತ್ತಿತ್ತು.

loading...