ಬಿ.ಜೆ.ಪಿ – ಕಾಂಗ್ರಸ್ ಹಿಂದುತ್ವದ ನಾಟಕ : ಮುತಾಲಿಕ್

0
22
loading...

ಕನ್ನಡಮ ್ಮಸುದ್ದಿ- ಹುಬ್ಬಳ್ಳಿ: ಬಿಜೆಪಿಯ ಢೋಂಗಿ ಹಿಂದುತ್ವವನ್ನು ಬಯಲಿಗೆಳೆಯುವ ಉದ್ದೇಶದಿಂದ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಡೋಂಗಿ ಹಿಂದುತ್ವ ನಡೆಸಿವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು. ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 224 ಕ್ಷೇತ್ರಗಳ ಪೈಕಿ ಶಿವಸೇನೆ ಒಟ್ಟು 60 ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದೆ. ಹಿಂದುತ್ವದ ಅಜೆಂಡಾ ಮೇಲೆ ಚುನಾವಣೆ ಎದುರಿಸಲಿದ್ದೇವೆ ಎಂದರು. ಚುನಾವಣೆಯಲ್ಲಿ ಶಿವಸೇನೆಯ ಚಿನ್ಹೆ ಬಿಲ್ಲು ಬಾಣ ಗುರುತು ಇದ್ದು, ಶಿವಸೇನೆಯ ಮೊದಲ ಪಟ್ಟಿಯಲ್ಲಿ 21 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದ ಅವರು ಎರಡನೇ ಪಟ್ಟಿ ಶಿವಸೇನೆಯ ರಾಜ್ಯ ಉಸ್ತುವಾರಿ ಆಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ಸಮ್ಮುಖದಲ್ಲಿ ಏ. 18 ರಂದು ಬಿಡುಗಡೆ ಮಾಡಲಾಗುವುದು ಎಂದರು.
ಶಿವಸೇನೆಯ ಸ್ಪರ್ಧೆಯಿಂದ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿದೆ.ಕಾಂಗ್ರೆಸ್ ನಲ್ಲಿರುವ ದುಷ್ಟರನ್ನು ಭ್ರಷ್ಟಾಚಾರ ಮಾಡುವವರನ್ನು ಹಾಗೂ ಕೊಲೆ ಗಡುಕರನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್ ಮುಕ್ತ ಮಾಡುತ್ತಾರೆ ಎಂದು ಲೇವಡಿ ಮಾಡಿದ ಅವರು ರಾಜ್ಯದಲ್ಲಿ ಶಿವಸೇನೆಗೆ ಶ್ರೀರಾಮಸೇನೆ ಸಂಪೂರ್ಣ ಬೆಂಬಲ ನೀಡಲಿದೆ. ಹೊಸ ವಿಚಾರಧಾರೆ ಇಟ್ಟುಕೊಂಡು ನಾವು ಮುಂದೆ ಬಂದಿದ್ದೇವೆ ಎಂದರು. ರಾಜ್ಯದಲ್ಲಿ ಹಲವು ಜನ ಶಿವಸೇನೆಯ ಕಾರ್ಯಕರ್ತರ ಹತ್ಯೆಯಾದರೂ ಕಾಂಗ್ರೆಸ್ ಹಾಗೂ ಬಿಜೆಪಿ ಕಡೆಗಣಿಸಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯನ್ನ ಮನೆಗೆ ಕಳಿಸುವ ಉದ್ದೇಶದಿಂದ ಶಿವಸೇನೆ ಸ್ಪರ್ಧೆ ಮಾಡುತ್ತಿದೆ ಎಂದು ಪ್ರಮೋದ ಮುತಾಲಿಕ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಶಿವಸೇನೆಯ ರಾಜ್ಯ ಉಸ್ತುವಾರಿ ಆದೋಂಲ ಮಠದ ಸಿದ್ದಲಿಂಗ ಸ್ವಾಮಿ ಅವರು ಮೊದಲ ಪಟ್ಟಿ ಬಿಡುಗಡೆ ಮಾಡಿದರು.

loading...