ಬೆಳ್ನಿ ಗ್ರಾಮದಲ್ಲಿ ಶಾಸಕರ ಮತಬೇಟೆ : ಮಹಿಳೆಯರಿಂದ ಅಭಿನಂದನೆ

0
21
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಭಟ್ಕಳದ ಬೆಳ್ನಿ ಮಾವಿನಕುರ್ವಾ ಭಾಗಕ್ಕೆ ಮತಯಾಚನೆಗೆ ಬಂದ ಶಾಸಕ ಮಂಕಾಳ ವೈದ್ಯರಿಗೆ ಗ್ರಾಮದ ಮಹಿಳೆಯರು ಹೂವಿನ ಹಾರ ಹಾಕುವುದರ ಮುಖಾಂತರ ಭವ್ಯ ಸ್ವಾಗತ ಕೋರಿದರು.
ನಂತರ ಮಾತನಾಡಿದ ಮಹಿಳೆಯರು ಕಳೇದ ಅನೇಕ ವರ್ಷಗಳಿಂದ ಬೆಳ್ನಿಗ್ರಾಮದಲ್ಲಿ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಯಾರು ಪರಿಹರಿಸಲು ಸಾಧ್ಯವಾಗಿರಲಿಲ್ಲ. ಮಹಿಳೆಯರು 2 -3 ಕಿಲೋಮೀಟರ್ ಕ್ರಮಿಸಿ ಒಂದು ಕೋಡ ನೀರನ್ನು ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿ ಇತ್ತು. ಶಾಸಕರು ತಮ್ಮ ಅಧಿಕಾರವಧಿಯಲ್ಲಿ ವಿಶೇಷ ಅನುದಾನ ನೀಡಿ ನಮಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಹಾಗಾಗಿ ನಾವು ಅವರಿಗೆ ಸದಾ ಚಿರಋಣಿ ಎಂದು ತಿಳಿಸಿದರು.

ನಂತರ ಮಾತನಾಡಿದ ಶಾಸಕ ಮಂಕಾಳ ವೈದ್ಯರು ನನ್ನ ಅಧಿಕಾರವಧಿಯಲ್ಲಿ ನೊಂದವರ ಬಡವರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಕ್ಷೇತ್ರದ ಎಲ್ಲಾ ಗ್ರಾಮಕ್ಕೂ ಮೂಲಭೂತ ಸೌಕರ್ಯ ನೀಡಲು ಶ್ರಮಿಸಿದ್ದೇನೆ ಅದರಲ್ಲೂ ಬೆಳ್ನಿ ಬಂದರ ಪ್ರದೇಶ ನನ್ನ ತವರು ಮನೆಯಾಗಿದ್ದು, ಇಲ್ಲಿ ಸಾಕಷ್ಟು ಅಬೀವೃದ್ಧಿ ಕಾರ್ಯವನ್ನು ಮಾಡಿದ್ದೇನೆ ಎಂದು ತಿಳಿಸಿದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಿದ್ದು, ಹಿಂದಿನ ಬಾರಿ ನನಗೆ ಮತ ನೀಡಿ ಆಶೀರ್ವದಿಸಿದಂತೆ ಈ ಬಾರಿ ಹಸ್ತ ಗುರುತಿಗೆ ಮತ ನೀಡಿ ನನ್ನ ಗೆಲುವಿಗೆ ಸಹಕರಿಸಬೇಕಾಗಿ ಕೋರಿಕೊಂಡರು.
ಖಾರ್ವಿ ಸಮಾಜದ ಮುಖಂಡರಾದ ವಸಂತ ಖಾರ್ವಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠ್ಠಲ ನಾಯ್ಕ, ತಾಪಂ ಅಧ್ಯಕ್ಷ ಈಶ್ವರ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...