ಬೆಳ್ಳಿ ಪದಕ ಗೆದ್ದ ಕುಂದಾಪುರದ ಹುಡುಗ

0
27
loading...

ಗೋಲ್ಡ್‍ಕೋಸ್ಟ್ : ಈ ಬಾರಿ ಪದಕಗಳ ಸುರಿಮಳೆಯನ್ನೇ ಗೈಯುವ ಹುಮ್ಮಸ್ಸಿನಲ್ಲಿರುವ ಭಾರತ ತಂಡವು ಆರಂಭದ ದಿನವೇ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.  ಇಂದು ನಡೆದ ಪುರುಷರ 56 ಕೆಜಿ ವೆಫ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕರ್ನಾಟಕದ ಕುಂದಾಪುರದ ಗುರುರಾಜ್ 249 ಕೆಜಿ ಭಾರವನ್ನು ಎತ್ತುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾನೆ.

ಗುರುರಾಜ್ ಟ್ರಕ್ ಡ್ರೈವರ್‍ರೊಬ್ಬರ ಮಗನಾಗಿದ್ದು 56 ಕೆಜಿ ವೆಫ್ಟ್ ಲಿಫ್ಟಿಂಗ್‍ನ ಎರಡು ಸುತ್ತಿನಲ್ಲಿ ಕ್ರಮವಾಗಿ 111 ಕೆಜಿ ಹಾಗೂ 138 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಲೇಷ್ಯಾದ ಮೊಹಮ್ಮದ್ ಈಜರ್ ಅಹಮದ್ 261 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರೆ, ಶ್ರೀಲಂಕಾದ ಚರ್ತುರಂಗ ಲಕ್ಮಲ್ (248 ಕೆಜಿ) ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.  2010ರ ಕಾಮನ್‍ವೆಲ್ತ್‍ನ ಹಿರಿಯ ವೆಟ್‍ಲಿಫ್ಟಿಂಗ್ ಹಾಗೂ 2016ರಲ್ಲಿ ಸೌತ್ ಏಷ್ಯಾನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಸೂರೆಗೊಂಡಿದ್ದ ಗುರುರಾಜ್,. 2017ರಲ್ಲಿ ವ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದರು.

loading...